ಸಚಿವ ರೋಷನ್ ಬೇಗ್, ಮಕ್ಕಳಿಗೆ ಇಡಿಯಿಂದ ನೋಟಿಸ್ ಜಾರಿ

ಮಂಗಳವಾರ, 16 ಜನವರಿ 2018 (08:43 IST)

ಹಜ್ ಮತ್ತು ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಅವರಿಗೆ ಜಾರಿ ನಿರ್ದೇಶನಾಲಯದಿಂದ (ಇಡಿ)ನೋಟಿಸ್ ನೀಡಲಾಗಿದ್ದು, ಇದರಿಂದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಶಾಕ್ ಎದುರಾಗಿದೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಮಾಡಿರುವ ಆರೋಪದ ಮೇರೆಗೆ ರೋಷನ್ ಬೇಗ್ ಅವರೊಂದಿಗೆ ಅವರ ಪುತ್ರ ಹಾಗೂ ಪುತ್ರಿಗೂ ನೋಟಿಸ್ ನೀಡಲಾಗಿದೆ.

ರುಮಾನ್ ಬೇಗ್ ಹಾಗೂ ಸಬೀಹಾ ಫಾತಿಮಾ ಅವರ ಒಡೆತನದ ರುಮಾನ್ ಎಂಟರ್ ಪ್ರೈಸಸ್ ಕಂಪೆನಿ 2007ರಲ್ಲಿ ಆರಂಭವಾಗಿದ್ದು, ದುಬೈನಿಂದ ಬಂದ ಹಣದ ಬಗ್ಗೆ ಸಮರ್ಪಕ ಲೆಕ್ಕ ನೀಡದ ಕಾರಣ ಈ ನೋಟಿಸ್ ನೀಡಲಾಗಿದೆ.

ನೋಟಿಸ್ ಮಾಹಿತಿ ಅರಿತ ರೋಷನ್ ಬೇಗ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ