ಮಾಸ್ಕ್ ಧರಿಸದೆ ಹೊರಬರುವವರಿಗೆ 100ರೂ ದಂಡ ವಿಧಿಸಲು ಮುಂದಾದ ಮೈಸೂರು ಮಹಾನಗರ ಪಾಲಿಕೆ

ಮಂಗಳವಾರ, 28 ಏಪ್ರಿಲ್ 2020 (10:48 IST)
ಮೈಸೂರು : ಮೈಸೂರಿನಲ್ಲಿ ಮಾಸ್ಕ್ ಧರಿಸದೆ ಹೊರಬರುವವರಿಗೆ ತಕ್ಕ ಪಾಠ ಕಲಿಸಲು ಮೈಸೂರು ಮಹಾನಗರ ಪಾಲಿಕೆ ನಿರ್ಧಾರ ಮಾಡಿದೆ.


ಮೈಸೂರಿನಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜೀವ ಭಯವಿದ್ದರೂ ಜನರು ಕ್ಯಾರೆ ಮಾಡದೇ ಮಾಸ್ಕ್ ಧರಿಸದೆ ಹೊರಗಡೆ ಓಡಾಡುತ್ತಿದ್ದಾರೆ.


ಇದರಿಂದ ಕಂಗೆಟ್ಟ ಮಹಾನಗರ ಪಾಲಿಕೆ ಜನರಿಗೆ ತಕ್ಕ ಪಾಠ ಕಲಿಸಲು ಮಾಸ್ಕ್ ಧರಿಸದೆ ಹೊರಬರುವವರಿಗೆ 100ರೂ ದಂಡ ವಿಧಿಸಲು ತೀರ್ಮಾನಿಸಿದೆ. ಏಪ್ರಿಲ್ 30ರಿಂದ ಪಾಲಿಕೆ ಸಿಬ್ಬಂದಿಗಳು ದಂಡ ವಿಧಿಸಲಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ