ನಿಜಾಮುದ್ದೀನ್ ಮಸೀದಿ ಮುಸ್ಲಿಂ ಗುರುಗಳಿಂದ ರಾಜ್ಯದಲ್ಲಿ ಪ್ರಚಾರ : ಲಾಕ್ ಡೌನ್ ಬಿಗಿ

ಶನಿವಾರ, 4 ಏಪ್ರಿಲ್ 2020 (19:29 IST)
ದಿಲ್ಲಿಯ ನಿಜಾಮುದ್ದಿನ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ 10  ಮಂದಿ ಮುಸ್ಲಿಂ ಧರ್ಮ ಗುರುಗಳು ರಾಜ್ಯದಲ್ಲಿ ಧರ್ಮ ಪ್ರಚಾರ, ಉಪನ್ಯಾಸ ಮಾಡಿದ್ದಾರೆ.

 ಮಂಡ್ಯ ಜಿಲ್ಲೆಯ ನಾಗಮಂಗಲ ಹಾಗೂ ಮಳವಳ್ಳಿಯಲ್ಲಿ ಸಂಚರಿಸಿ ಧಾರ್ಮಿಕ ಉಪನ್ಯಾಸ ನೀಡಿರುವ ಹಿನ್ನೆಲೆಯಲ್ಲಿ ಈ ತಾಲೂಕುಗಳಲ್ಲಿ ಲಾಕ್ ಡೌನ್ ಅನ್ನು ತೀವ್ರ ಗೊಳಿಸಲಾಗಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್  ಹೇಳಿದ್ದಾರೆ.

ಒಟ್ಟು 10 ಮಂದಿ ಮುಸ್ಲಿಂ ಧರ್ಮ ಗುರುಗಳು ದಿಲ್ಲಿಯ ವಿವಿಧ ಭಾಗಗಳಿಗೆ ಸೇರಿದವರಾಗಿದ್ದು, ನಿಜಾಮುದ್ದೀನ ಸಭೆ ಮುಗಿಸಿಕೊಂಡು ಜ.27 ರಂದು ದಿಲ್ಲಿಯಿಂದ ಹೊರಟು 29 ರಂದು ಮೈಸೂರು ತಲುಪಿರುತ್ತಾರೆ. ಅಲ್ಲಿ 40 ಮಸೀದಿಗಳಲ್ಲಿ ಪ್ರಚಾರ ನಡೆಸಿ ಬಳಿಕ ಮಾ.13 ರಂದು ಮೈಸೂರಿಂದ ನಾಗಮಂಗಲಕ್ಕೆ ಬಂದು ಮಸೀದಿಯೊಂದರಲ್ಲಿ ಮಾ.23 ರವರೆಗೆ ವಾಸ್ತವ್ಯ ಹೂಡಿರುತ್ತಾರೆ. ಮಾ.23 ನಾಗಮಂಗಲದಿಂದ ಮಳವಳ್ಳಿ ಗೆ ಟ್ಯಾಕ್ಸಿ ಯಲ್ಲಿ ಬಂದು ದರ್ಗಾ ಒಂದರಲ್ಲಿ ನೆಲೆಸಿರುತ್ತಾರೆ.

ಅಲ್ಲಿಂದ 29 ರಂದು ಬನ್ನೂರು ಮಾರ್ಗ ಮೈಸೂರಿಗೆ ತೆರಳುತ್ತಾರೆ. ಈ ಸಂದರ್ಭದಲ್ಲಿ ಚೆಕ್ ಪೋಸ್ಟ್ ಪರಿಶೀಲನೆ ನಡೆಸಿದಾಗ ಇವರ ಚಲನ ವಲನ ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದರಿಂದ ಇವರನ್ನು ಮೈಸೂರು ಜಿಲ್ಲಾಡಳಿತ ಹೋಂಕೊರಂಟೈನ್ ನಲ್ಲಿ ಇರಿಸಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಈ ಹಿನ್ನೆಲೆಯಲ್ಲಿ ಫೆ.5 ರಂದು ದಿಲ್ಲಿಗೆ ಹೋಗಿಬಂದಿದ್ದ ಮಳವಳ್ಳಿಯ 7 ಮಂದಿ ಸೇರಿದಂತೆ ಅವರ ಕುಟುಂಬದ 25 ಮಂದಿ ಹಾಗೂ ನಾಗಮಂಗಲದ 24 ಐಸೊಲೇಷನ್ ವಾರ್ಡ್ ನಲ್ಲಿ ಇರಿಸಲಾಗಿದೆ ಎಂದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ