ರಾಮನವಮಿಯ ಭಕ್ತಿಯ ನುಂಗಿ ಹಾಕಿದ ಕೊರೋನಾ ರಾಕ್ಷಸ

ಗುರುವಾರ, 2 ಏಪ್ರಿಲ್ 2020 (09:22 IST)
ಬೆಂಗಳೂರು: ಎಲ್ಲಾ ಸರಿ ಹೋಗಿದ್ದರೆ ಇಂದು ಎಲ್ಲೆಡೆ ರಾಮನವಮಿಯ ಭಕ್ತಿಯ ಪಾನಕ ಹಂಚಬೇಕಿತ್ತು. ಆದರೆ ಕೊರೋನಾ ಎಂಬ ರಾಕ್ಷಸ ಈ ಎಲ್ಲಾ ಸಂಭ್ರಮವನ್ನು ನುಂಗಿ ಹಾಕಿದ್ದಾನೆ.


ಇಂದು ಶ್ರೀರಾಮ ನವಮಿಯ ದಿನ. ಪ್ರತೀ ವರ್ಷವೂ ಎಲ್ಲೆಡೆ ರಾಮ, ಹನುಮ ವೇಷಧಾರಿಗಳು ಪಾನಕ, ಕೋಸಂಬರಿ, ಮಜ್ಜಿಗೆ ವಿತರಣೆ ಮಾಡಿ ಸಂಭ್ರಮದಿಂದ ರಾಮನವಮಿ ಆಚರಿಸುವುದು ವಾಡಿಕೆ. ಅಷ್ಟೇ ಅಲ್ಲದೆ, ರಾಮನವಮಿಗೆ ಪ್ರತೀ ವರ್ಷವೂ ನಡೆಯುವ ಸಂಗೀತ ಕಾರ್ಯಕ್ರಮಗಳೂ ಈ ವರ್ಷ ನಡೆಯುತ್ತಿಲ್ಲ.

ಕೊರೋನಾ ತಡೆಯಲು ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಯುಗಾದಿಯಂತೆ ಈ ಹಬ್ಬವೂ ನೀರಸವಾಗಿ ಮುಗಿಯಲಿದೆ. ಸರಳವಾಗಿ ನಿಮ್ಮ ಮನೆಯೊಳಗೇ ಭಕ್ತಿಯಿಂದ ರಾಮನಿಗೆ ನಮಿಸಿ ಕೊರೋನಾ ರಾಕ್ಷಸನನ್ನು ಹೋಗಲಾಡಿಸಲು ಬೇಡಿಕೊಳ್ಳಬೇಕಷ್ಟೇ!

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ