ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟದಲ್ಲಿ ಯಾತ್ರಿ ನಿವಾಸ್

ಶುಕ್ರವಾರ, 20 ಮಾರ್ಚ್ 2020 (19:46 IST)
ಆಂಜನೇಯ ಸ್ವಾಮಿ ದೇವಸ್ಥಾನವು ಐತಿಹಾಸಿಕ ಹಿನ್ನಲೆಯುಳ್ಳ ಸ್ಥಳವಾಗಿದ್ದು ಈ ಸ್ಥಳದಲ್ಲಿ ಯಾತ್ರಿ ನಿವಾಸ್ ಗೆ ಸಿದ್ಧತೆ ನಡೆಸಲಾಗುತ್ತಿದೆ.

ಅಂಜನಾದ್ರಿ ಬೆಟ್ಟದಲ್ಲಿರುವ ಈ ದೇವಸ್ಥಾನಕ್ಕೆ ಉತ್ತರ ಭಾರತದಿಂದ ಹಾಗೂ ಬೇರೆ ಬೇರೆ ದೇಶಗಳಿಂದ ಮತ್ತು ಕರ್ನಾಟಕದಾದ್ಯಂತ ಸಹಸ್ರಾರು ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಭಕ್ತರು ಆಗಮಿಸುವರು. ಇಲ್ಲಿಗೆ ಬರುವ ಭಕ್ತರಿಗೆ ಅನುಕೂಲವಾಗಲು ಯಾತ್ರಿ ನಿವಾಸ ನಿರ್ಮಿಸುವುಂತೆ ಸಂಸದ ಸಂಗಣ್ಣ ಕರಡಿ  ಕೇಂದ್ರ ಪ್ರವಾಸೋದ್ಯಮ ಸಚಿವರಿಗೆ  ಮನವಿ ಮಾಡುವುದರೊಂದಿಗೆ ಒತ್ತಾಯಿಸಿದರು.

ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಈ ಕುರಿತು ಚರ್ಚೆ ಮೂಲಕ ಕೇಂದ್ರ ಪ್ರವಾಸೋದ್ಯಮ ಸಚಿವರ ಗಮನ ಸೆಳೆದ ಅವರು, ಈ ಕ್ಷೇತ್ರವು ರಾಮಾಯಣದ ಪ್ರಕಾರ ಹನುಮ ಜನಿಸಿದ ಸ್ಥಳವಾಗಿದ್ದು, ಇದಲ್ಲದೇ ಪ್ರತಿವರ್ಷ 70 ರಿಂದ80 ಸಾವಿರ ಹನುಮ ಮಾಲಾಧಾರಿ ಕ್ಷೇತ್ರಕ್ಕೆ ಆಗಮಿಸಿ ದರ್ಶನವನ್ನು ಪಡೆದುಕೊಳ್ಳುವರು. ಇವರಿಗೆ ತಂಗಲು ಅನುಕೂಲವಾಗುವದಕ್ಕಾಗಿ ಅತ್ಯಾಧುನಿಕ ಯಾತ್ರಿ ನಿವಾಸ್ ನಿರ್ಮಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ