ಹಣಕ್ಕಾಗಿ ರಮೇಶ್ ಜಾರಕಿಹೊಳಿ ಮಾರಾಟ?: ಜೆಡಿಎಸ್ ಶಾಸಕ ಸ್ಫೋಟಿಸಿದ್ರು ಬಾಂಬ್

ಬುಧವಾರ, 3 ಜುಲೈ 2019 (19:37 IST)
ಮೈತ್ರಿ ಸರಕಾರದಲ್ಲಿ ಶಾಸಕ ಸ್ಥಾನಕ್ಕೆ ಕೈ ಪಡೆಯ ನಾಯಕರು ರಾಜೀನಾಮೆ ನೀಡಿರುವ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಶಾಸಕರ ವಿರುದ್ಧ ಜೆಡಿಎಸ್ ಶಾಸಕರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಿಗೆ ರಮೇಶ ಜಾರಕಿಹೊಳಿ ಹಣದ ಬೇಡಿಕೆ ಇಟ್ಟಿದ್ದರು ಎಂಬರ್ಥದಲ್ಲಿ ಪಿರಿಯಾಪಟ್ಟಣ ಜೆಡಿಎಸ್ ಶಾಸಕ ಕೆ.ಮಹದೇವ್ ಹೊಸ ಸುದ್ದಿ ಸ್ಫೋಟ ಮಾಡಿದ್ದಾರೆ.

ಕೇವಲ ಹಣಕ್ಕಾಗಿ ರಮೇಶ್ ಜಾರಕಿಹೊಳಿ ಅವರು ಪಕ್ಷಾಂತರ ಮಾಡುತ್ತಿದ್ದಾರೆ ಎಂಬರ್ಥದಲ್ಲಿ ಮಹದೇವ್ ಹೇಳಿಕೆ ನೀಡುವ ಮೂಲಕ ರಾಜಕೀಯ ವಲಯದಲ್ಲಿ ಚರ್ಚೆಗೆ ಶುರುವಾಗಲು ನಾಂದಿ ಹಾಡಿದ್ದಾರೆ.

ಸಿಎಂ ಅವರನ್ನು ಜಾರಕಿಹೊಳಿ ಭೇಟಿ ಮಾಡಿದ್ದಾಗ ನಾನೂ ಅಲ್ಲೇ ಇದ್ದೆ. ಆಗ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಿಗೆ 80 ಕೋಟಿ ರೂ. ನೀಡಿದ್ರೆ ಮಾತ್ರ ಮೈತ್ರಿ ಸರಕಾರಕ್ಕೆ ಬೆಂಬಲ ಇಲ್ಲದಿದ್ರೆ ರಾಜೀನಾಮೆ ನೀಡೋ ಬೆದರಿಕೆ ಹಾಕಿದ್ರು ಎಂಬರ್ಥದಲ್ಲಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

30 ರಿಂದ 40 ಕೋಟಿ ರೂ. ನೀಡಲು ಬಿಜೆಪಿಯ ಕೆಲವು ಮುಖಂಡರು ನಮ್ಮ ಮನೆ ಬಳಿ ಬಂದಿದ್ರು ಎಂದು ದೂರಿದ ಅವರು, ಹಣವೂ ಬೇಡ ಕಮಲ ಪಡೆಯ ಸಹವಾಸವೂ ಬೇಡ ಎಂದು ತಿರಸ್ಕರಿದ್ದೆ ಎಂದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ