ಪ್ರವಾಹ ಸಂತ್ರಸ್ತರಿಗೆ ಇನ್ನೂ ಸಿಕ್ಕಿಲ್ಲ ಪರಿಹಾರ; ಭರವಸೆ ನೀಡಿ ಮರೆತುಬಿಡ್ತಾ ಸರ್ಕಾರ?

ಶುಕ್ರವಾರ, 14 ಫೆಬ್ರವರಿ 2020 (10:12 IST)
ಬೆಂಗಳೂರು : 6 ತಿಂಗಳು ಕಳೆದ್ರೂ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲವಾದ್ದರಿಂದ  ಪುವರ್ವಸತಿ ಕಲ್ಪಿಸುತ್ತೇನೆಂದು ಹೇಳಿದ ಸರ್ಕಾರ ಮರೆತುಬಿಡ್ತಾ? ಎಂಬ ಆರೋಪ ಕೇಳಿಬಂದಿದೆ.


ಮಲೆಮನೆ, ಮಧುಗುಂಡಿ, ಆಲೇಖಾನ್ ಹೊರಟ್ಟಿ ಗ್ರಾಮ ಸೇರಿ ಹಲವು ಗ್ರಾಮಗಳಲ್ಲಿ ಪ್ರವಾಹದಿಂದ ಅಪಾರ ಹಾನಿಯಾಗಿದೆ. ಮನೆ, ಪರ್ಯಾಯ ಜಾಗ ಕೊಡುವುದಾಗಿ ಸರ್ಕಾರ ಹೇಳಿತ್ತು.


ಆದರೆ ಈವರೆಗೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸಿಲ್ಲ. 6 ತಿಂಗಳು ಕಳೆದ್ರೂ ಜಿಲ್ಲಾಡಳಿತ ಇನ್ನೂ ಜಾಗವನ್ನು ಗುರುತಿಸಲಿಲ್ಲ. ಬದುಕಿನ ದಾರಿ ಕಾಣದೆ ನೆರೆ ಸಂತ್ರಸ್ತರು ಕಣ್ಣೀರಿಡುತ್ತಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ