ಗಣೇಶನ ಹಬ್ಬದ ಗದ್ದಲದಲ್ಲಿ ಇದನ್ನು ಮಾತ್ರ ಮರೀಬೇಡಿ!

ಸೋಮವಾರ, 2 ಸೆಪ್ಟಂಬರ್ 2019 (06:55 IST)
ಬೆಂಗಳೂರು: ಮತ್ತೆ ಗಣೇಶೋತ್ಸವ ಬಂದಿದೆ. ಚೌತಿ ಹಬ್ಬಕ್ಕೆ ಮನೆಯಲ್ಲಿ, ಬೀದಿ ಬೀದಿಗಳಲ್ಲಿ ಗಣೇಶನ ಕೂರಿಸಿ ಪೂಜೆ ಮಾಡುವುದು ನಮ್ಮ ಪದ್ಧತಿ.


ಆದರೆ ಈ ರೀತಿ ಮಾಡುವ ಮೊದಲು ಕೆಲವು ವಿಚಾರಗಳನ್ನು ನೆನಪಲ್ಲಿಡುವುದು ಒಳಿತು. ಗಣೇಶ ಹಬ್ಬಕ್ಕೆ ಬೇರೆಯವರಿಗಿಂತ ದೊಡ್ಡ ಮೂರ್ತಿ ಕೂರಿಸಬೇಕೆಂದು ಸ್ಪರ್ಧೆಗೆ ಬೀಳುವುದು, ಪಿಒಪಿ ಗಣಪನ ತಂದು ಎಲ್ಲೆಂದರಲ್ಲಿ ಹಾಕಿ ಪರಿಸರಕ್ಕೆ ಹಾನಿ ಮಾಡುವುದು ಇತ್ಯಾದಿ.

ಭಕ್ತಿಯಿಂದ ಪೂಜೆ ಮಾಡಲು ಗಣೇಶನ ದೊಡ್ಡ ಮೂರ್ತಿಯೇ ಆಗಬೇಕೆಂದಿಲ್ಲ. ಚಿಕ್ಕದಾದ ಮಣ್ಣಿನ ಗಣಪನ ಕೂರಿಸಿದರೂ ಸಾಕು. ದೊಡ್ಡ ದೊಡ್ಡ ಗಣಪನ ಮೂರ್ತಿ ತಂದು ಅದನ್ನು ವಿಸರ್ಜಿಸಲು ವಿಪರೀತ ನೀರು ಖರ್ಚು ಮಾಡುವುದು, ಅದನ್ನು ಎಲ್ಲೆಂದರಲ್ಲಿ ಬಿಸಾಕುವುದು ಮಾಡಿದರೆ ಖಂಡಿತಾ ಗಣೇಶ ಒಲಿಯಲ್ಲ. ನಮ್ಮ ಪರಿಸರ ಹಾಳಾಗಬಹುದಷ್ಟೇ. ಹೀಗಾಗಿ ಪರಿಸರದ ಬಗೆಗಿನ ಕಾಳಜಿ ಮನಸ್ಸಲ್ಲಿಟ್ಟುಕೊಂಡು ಹಬ್ಬ ಆಚರಿಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ