ಜಿಲ್ಲಾಸ್ಪತ್ರೆ ಪರಿಸ್ಥಿತಿ ನೋಡಿ ಗರಂ ಆದ ಸಂಸದ

ಶನಿವಾರ, 26 ಅಕ್ಟೋಬರ್ 2019 (19:12 IST)
ಜಿಲ್ಲಾಸ್ಪತ್ರೆಯಲ್ಲಿನ ಅವ್ಯವಸ್ಥೆಗಳನ್ನು ನೋಡಿದ ಸಂಸದರೊಬ್ಬರು ಗರಂ ಆಗಿದ್ದಾರೆ.
 

ಮಹಾನಗರಪಾಲಿಕೆ ಮತ್ತು ಜಿಮ್ಸ್ ಸಂಯುಕ್ತಾಶ್ರಯದಲ್ಲಿ  ಕಲಬುರಗಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನ ಮತ್ತು ಶ್ರಮದಾನಕ್ಕೆ ಕಲಬುರಗಿ ಲೋಕಸಭಾ ಸಂಸದ ಡಾ.ಉಮೇಶ ಜಾಧವ ಚಾಲನೆ ನೀಡಿದ್ರು.

ಆಸ್ಪತ್ರೆ ಆವರಣದಲ್ಲಿ ಸುತ್ತಾಡಿ ಅಲ್ಲಲ್ಲಿ ಕಸ, ಪ್ಲಸ್ಟಿಕ್, ಸಿರಿಂಜ್, ನೀಡಲ್‍ಗಳನ್ನು ಬಿದ್ದಿರುವುದಕ್ಕೆ ಸಂಸದರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ರು. ಆಸ್ಪತ್ರೆ ಆವರಣದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ಕೋಡಿ. ರೋಗಿಗಳು ಗುಣವಾಗಲೆಂದೇ ಆಸ್ಪತ್ರೆಗೆ ಬರುತ್ತಾರೆ.  ಆಸ್ಪತ್ರೆಯಲ್ಲೇ ಸ್ವಚ್ಛತೆ ಇಲ್ಲದೆ ಹೋದಲ್ಲಿ ರೋಗಿಗಳು ಗುಣವಾಗುವುದಾದರೆ ಹೇಗೆ ಎಂದು ಪ್ರಶ್ನಿಸಿದರು. ಆರೋಗ್ಯ ಸಂಸ್ಥೆಗಳಿಂದ ಉತ್ಪತ್ತಿಯಾಗುವ ಜೀವಕ್ಕೆ ಹಾನಿಕಾರಿಕವಾಗಿರುವ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡದೆ ವೈಜ್ಞಾನಿಕ ವಿಲೇವಾರಿ ಮಾಡಬೇಕು ಎಂದು ಜಿಮ್ಸ್ ನಿರ್ದೇಶಕ ಡಾ.ಉಮೇಶ ಅವರಿಗೆ ಸೂಚನೆ ನೀಡಿದ್ರು.

ಸುಮಾರು 100 ಜನ ಆಸ್ಪತ್ರೆಯ ಕಾರ್ಮಿಕರು ವಾಸಿಸುವ ಕಟ್ಟಡದ ಸುತ್ತಮುತ್ತ ಕಸಗಳಿಂದ ನಾರುತ್ತಿದ್ದು, ಕೂಡಲೆ ಸ್ವಚ್ಛಗೊಳಿಸಬೇಕು. ಆಸ್ಪತ್ರೆಯ ಮುಂಭಾಗದಲ್ಲಿ ಮಳೆಯಿಂದ ನೀರು ನಿಂತು ಸಂಪೂರ್ಣ ರಸ್ತೆ ಹದಗೆಟ್ಟಿರುವುದರಿಂದ ತಾತ್ಮಲಿಕವಾಗಿ ಮುರಮ್ ಹಾಕಬೇಕೆಂದು ಸಂಸದರು ಖಡಕ್ ಸೂಚನೆ ನೀಡಿದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ