ಬೆಳಗ್ಗೆ ಪೂಜೆ ಮಾಡುತ್ತಿದ್ದ ಸ್ವಾಮೀಜಿ ರಾತ್ರಿ ನಿಧಿಗೆ ಹಾಕುತ್ತಿದ್ದ ಕನ್ನ

ಶುಕ್ರವಾರ, 28 ಫೆಬ್ರವರಿ 2020 (10:59 IST)
ವೀರಭದ್ರೇಶ್ವರ ದೇವಾಲಯದ ಸ್ವಾಮೀಜಿಯೊಬ್ಬರು ಇದೀಗ ಮಾಡಬಾರದ ಕೆಲಸ ಮಾಡಿ ಪೊಲೀಸರ ಅತಿಥಿಯಾಗಿದ್ದಾರೆ.

ಶಿವಮೊಗ್ಗದ ಸಾಗರ ತಾಲೂಕಿನ ಆವಿನಹಳ್ಳಿಯ ಬಡಗೋಡಿನ ವೀರಭದ್ರೇಶ್ವರ ದೇವಾಲಯದ ಸ್ವಾಮೀಜಿ ಮಲ್ಲಿಕಾರ್ಜುನಯ್ಯ ಸೇರಿದಂತೆ ಐವರನ್ನು ಪೊಲೀಸರು ಬಂಧನ ಮಾಡಿದ್ದಾರೆ.

ದೇವಾಲಯದಲ್ಲಿ ಬೆಳಗ್ಗೆ ದೇವರಿಗೆ ಪೂಜೆ ಮಾಡುತ್ತಿದ್ದ ಸ್ವಾಮೀಜಿ ರಾತ್ರಿ ಮಾತ್ರ ತನ್ನ ಸಹಚರರೊಂದಿಗೆ ಸೇರಿ ದೇವಾಲಯದ ಹಿಂಭಾಗದಲ್ಲಿ ನಿಧಿ ಹುಡುಕೋದಕ್ಕೆ ಅಂತ ಹೋಗಿದ್ದಾರೆ.

ವಿಷಯ ತಿಳಿದ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿ ಅರ್ಚಕ ಮಲ್ಲಿಕಾರ್ಜುನಯ್ಯ, ಶಿರಸಿಯ ಸೂರಜ್,  ಬರದವಳ್ಳಿಯ ಹಾಲಸ್ವಾಮಿ, ರಘುನಾಥ್, ಸಾಗರದ ಭಾಸ್ಕರ್ ರನ್ನು ಬಂಧನ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ