ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ಈ ಆಸ್ಪತ್ರೆ ಸಜ್ಜು

ಶನಿವಾರ, 9 ಮೇ 2020 (14:28 IST)
ಕೋವಿಡ್ -19 ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡಲು ಆಸ್ಪತ್ರೆ ಸಿದ್ಧಗೊಂಡಿದೆ.

ಕಾರವಾರದ ಕ್ರಿಮ್ಸ್ (ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ) ನಲ್ಲೂ ಕೋವಿಡ್-19 ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡಲು ಎಲ್ಲ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗಂತ ಉತ್ತರಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ರೋಶನ್ ಹೇಳಿದ್ದಾರೆ.  

ಕೋವಿಡ್ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ಮೂಲಕ ಚಿಕಿತ್ಸೆ ನೀಡಬಹುದೆಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯಿಂದಲೂ ಸುತ್ತೋಲೆ ಬಂದಿದೆ. ಈ ನಿಟ್ಟಿನಲ್ಲಿ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಹಿರಿಯ ತಜ್ಞರ ವೈದ್ಯರುಗಳಿಂದ ಸಿದ್ಧಪಡಿಸಲಾದ ವಿಸ್ತೃತವಾದ ವರದಿಯೊಂದನ್ನು ಸರ್ಕಾರಕ್ಕೆ ಹಾಗೂ ಐಸಿಎಮ್‌ಆರ್‌ಗೆ ಕಳುಹಿಸಲಾಗಿದೆ. ಅಲ್ಲಿಂದ ಅನಮೋದನೆ ಬಂದ ನಂತರ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಆರಂಭಿಸಲಾಗುವುದು ಎಂದರು.

 ಭಟ್ಕಳದ ಎಲ್ಲಾ 13 ಕೋವಿಡ್ ಸೋಂಕಿತರನ್ನು ಕಾರವಾರದ ಕ್ರಿಮ್ಸ್ಗೆ ಶಿಫ್ಟ್ ಮಾಡಲಾಗಿದೆ. ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಈಗಾಗಲೇ ವೆಂಟಿಲೆಟರ್ ಹೊಂದಿರುವಂಥ ತುರ್ತು ಚಿಕಿತ್ಸೆಯ 200 ಬೆಡ್‌ಗಳ ಕೋವಿಡ್ ಸ್ಪೇಷಲ್ ವಾರ್ಡ್ಗಳು  ಸಜ್ಜುಗೊಳಿಸಲಾಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ