ಕೋಮುವಾದಿ, ಸರ್ವಾಧಿಕಾರಿ ಆಡಳಿತದ ವಿರುದ್ಧ ಮತ ನೀಡಿದ್ದೇನೆ: ಸೌಮ್ಯ ರೆಡ್ಡಿ

Sampriya

ಶುಕ್ರವಾರ, 26 ಏಪ್ರಿಲ್ 2024 (19:35 IST)
Photo Courtesy X
ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ  ಸೌಮ್ಯ ರೆಡ್ಡಿ ಅವರು ತಮ್ಮ ಕುಟುಂಬದವರ ಜತೆ ಮತಚಲಾಯಿಸಿದರು.

ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ನನ್ನ ಕುಟುಂಬದ ಜೊತೆ ಮತಗಟ್ಟೆಗೆ ತೆರಳಿ ಬೆಲೆಯೇರಿಕೆ, ನಿರುದ್ಯೋಗ, ಬಡತನ, ಕೋಮುವಾದ, ಸರ್ವಾಧಿಕಾರಿ ಆಡಳಿತದ ವಿರುದ್ಧ ಪ್ರಜಾಪ್ರಭುತ್ವ, ಸಂವಿಧಾನದ ಉಳಿವಿಗಾಗಿ, ಸಮಾನತೆ, ಸೌಹಾರ್ದತೆ, ಸಾಮಾಜಿಕ ನ್ಯಾಯದ ಪರವಾಗಿ, ನನ್ನ ತೆರಿಗೆ ನನ್ನ ಹಕ್ಕಿಗಾಗಿ, ಬೆಂಗಳೂರು ದಕ್ಷಿಣ ಕ್ಷೇತ್ರ ಹಾಗೂ ಕರ್ನಾಟಕದ ಜನತೆಯ ನ್ಯಾಯಕ್ಕಾಗಿ ನನ್ನ ಹಕ್ಕಿನ ಮತ ಚಲಾಯಿಸಿದೆ.

ನಿಮ್ಮ ಒಂದು ಮತಕ್ಕೆ ದೇಶ ಬದಲಿಸುವ ಶಕ್ತಿಯಿದೆ. ನೀವೂ ತಪ್ಪದೇ ಮತದಾನ ಮಾಡಿ.

ಬದಲಾವಣೆಗಾಗಿ ಮತ ನೀಡಿ, ದೇಶಕಟ್ಟುವ ಕೈಗೆ ನಿಮ್ಮ ಮತದ ಮೂಲಕ ಬಲತುಂಬಿ.


ಋಣ ತೀರಿಸುವ ಪ್ರಯತ್ನ: ಸೌಮ್ಯ ರೆಡ್ಡಿ

ಕಳೆದೊಂದು ತಿಂಗಳ ಅವಧಿ ಜೀವನದಲ್ಲಿ ಬಹುಕಾಲ ನೆನಪಿನಲ್ಲಿ ಉಳಿಯುವ ವಿಶಿಷ್ಟ ಅನುಭವಗಳನ್ನು ನೀಡಿದೆ. ಚುನಾವಣಾ ಪ್ರಚಾರ ನಿಮಿತ್ತ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ತುಂಬೆಲ್ಲ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ್ದೇನೆ. ಹೋದ ಕಡೆಯೆಲ್ಲ ಜನರು ನನ್ನನ್ನು ತಮ್ಮ ಕುಟುಂಬ ಸದಸ್ಯೆಯಂತೆ ಕಂಡಿದ್ದಾರೆ, ಪ್ರೀತಿ ತೋರಿದ್ದಾರೆ, ವಿಶ್ವಾಸ ತುಂಬಿದ್ದಾರೆ. ನಿಮ್ಮೆಲ್ಲರ ಪ್ರೀತಿಯ ಋಣ ದೊಡ್ಡದು, ಮುಂದಿನ ದಿನಗಳಲ್ಲಿ ನಿಮ್ಮ ಸೇವೆಯ ಮೂಲಕ ಆ ಋಣ ತೀರಿಸುವ ಪ್ರಯತ್ನ ಮಾಡುತ್ತೇನೆ.

ನನ್ನ ಈ ಪಯಣದಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಂದ ದೊರೆತ ಬೆಂಬಲಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದರು ಕಡಿಮೆಯೆ. ತಾವೇ ಅಭ್ಯರ್ಥಿ ಎನ್ನುವಂತೆ ಹಗಲು ರಾತ್ರಿ ನಿಸ್ವಾರ್ಥದಿಂದ ಪ್ರಚಾರ ನಡೆಸಿದ, ಮತ ಯಾಚಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.

ಬದಲಾವಣೆಯ ನನ್ನ ಪ್ರಯತ್ನಕ್ಕೆ ಜೊತೆನಿಂತು ಬೆಂಬಲಿಸಿದ ಪ್ರತಿಯೊಬ್ಬರಿಗೂ ನಾನು ಋಣಿ. ಸಂಸದೆಯಾಗಿ ನಿಮ್ಮ ಸೇವೆ ಮಾಡುವ ಭಾಗ್ಯ ನನ್ನದಾಗಲಿ ಎಂದು ಆಶಿಸುತ್ತೇನೆ.

ಮತದಾನ ಮಾಡಿದ ಪ್ರತಿಯೊಬ್ಬರಿಗೂ ನನ್ನ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ