ಕೆರೆಯಲ್ಲಿ ಇಳಿದ ಬಿಜೆಪಿ ಶಾಸಕ ಮಾಡಿದ್ದೇನು?

ಗುರುವಾರ, 23 ಏಪ್ರಿಲ್ 2020 (16:29 IST)
ಬಿಜೆಪಿ ಶಾಸಕರೊಬ್ಬರು ಕೆರೆಯಲ್ಲಿ ಇಳಿದು ಹಾರಿ ಹಿಡಿದು ಕೆಲಸ ಮಾಡಿದ್ದಾರೆ. 

ಲಾಕ್ ಡೌನ್ ಹಿನ್ನೆಲೆಯಲ್ಲಿ ದುಡಿಯುವ ಕೈಗಳಿಗೆ ಮನ್ರೇಗಾ ಯೋಜನೆಯಡಿ ಕೆಲಸ ಕೊಡಲಾಗಿದೆ.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ಶಾಸಕ ಹಾಗೂ ಮುಖ್ಯಮಂತ್ರಿ ಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯ ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚು ಮಾನವ ದಿನಗಳನ್ನು ಸೃಜಿಸಿ ದುಡಿಯುವ ಕೈಗಳಿಗೆ ಹೆಚ್ಚು ಕೆಲಸ ಕೊಡುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಿಯಾಶೀಲರಾಗಬೇಕೆಂದರು.

ಕೂಲಿ ಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಸರ್ ಗಳನ್ನು ಒದಗಿಸಲಾಗಿದೆ. ಕೇಂದ್ರ ಸರ್ಕಾರ ಮನ್ರೇಗಾ ಯೋಜನೆಯ ಕೂಲಿಯನ್ನು 249 ರೂಪಾಯಿಯಿಂದ 275 ರೂಪಾಯಿಗೆ ಹೆಚ್ಚಿಸಿದೆ. ಹೆಚ್ಚು ಜನರು ಯೋಜನೆಯ ಸೌಲಭ್ಯ ಪಡೆಯಬೇಕೆಂದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ