85 ನೇ ಸಾಹಿತ್ಯ ಸಮ್ಮೇಳನದಲ್ಲಿ ಕೇಳಿ ಬಂತು ಹೌದು ಹುಲಿಯಾ

ಶನಿವಾರ, 8 ಫೆಬ್ರವರಿ 2020 (14:00 IST)
ಹೌದು ಹುಲಿಯಾ ಅಂತ ವೈರಲ್ ಆಗಿರೋ ಈ ಮಾತು 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಜೋರಾಗಿಯೇ ಕೇಳಿಬಂದಿದೆ.

ಅಖಂಡ ಕರ್ನಾಟಕದಲ್ಲಿ ಕನ್ನಡ ಒಂದೇ ಸಾರ್ವಭೌಮ ಹೀಗಾಗಿ ಕನ್ನಡ ಭಾಷೆ ಮಾತೃ ಭಾಷೆಯಾಗಬೇಕು ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕಲಬುರಗಿ ವಿವಿ ಆವರಣದಲ್ಲಿ ಆಯೋಜಿಸಿದ್ದ 85ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಕನ್ನಡ ಆಡಳಿತ ಭಾಷೆಯಾಗಲೇಬೇಕು ಇದರಲ್ಲಿ ಯಾವುದೇ ರಾಜಿಯಿಲ್ಲ, ಉದಾರತೆ ಮನುಷ್ಯತ್ವಕ್ಕೆ ಇರಬೇಕು.

ಭಾಷೆ ವಿಷಯದಲ್ಲಿ ಮಾತ್ರ ಕಠಿಣವಾಗಿರಬೇಕು ಎಂದರು. ರಾಜ್ಯದಲ್ಲಿ ಇಂಗ್ಲೀಷ್ ಶಾಲೆಗಳಿವೆ, ಕನ್ನಡ ಶಾಲೆಗಳಿವೆ ಎರಡು ದೋಣಿಗಳ ಮೇಲೆ ಕಾಲಿಟ್ಟು ನಡೆಯುತ್ತಿದ್ದೇವೆ. ಇಂಗ್ಲೀಷ್ ಕಲಿತರೆ ಉದ್ಯೋಗ ಸಿಗುತ್ತೆ ಅನ್ನೋ ಭ್ರಮೆಯಿಂದ ಹೊರಬರಬೇಕು ಅಂದ್ರು.

ಇನ್ನು ಈ ಸಾಹಿತ್ಯ ಸಮ್ಮೇಳನದ ವಿಜಯ ಪ್ರಧಾನ ವೇದಿಕೆ ಮೇಲೆ ಮಾತನಾಡಲು ಮಾಜಿ ಸಿಎಂ ಸಿದ್ದರಾಮಯ್ಯ ಬರುತ್ತಿದ್ದಂತೆ ಕನ್ನಡ ನುಡಿ ಜಾತ್ರೆಗೆ ಬಂದ ಕೆಲ ಕನ್ನಡಿಗರು ಹೌದು ಹುಲಿಯಾ.. ಹೌದು ಹುಲಿಯಾ ಅಂತಾ ಕೂಗಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ