ಈ ಕಾರಣಕ್ಕೆ ಕೆಲಸಕ್ಕೆಂದು ಬಂದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ದಂಪತಿ

ಬುಧವಾರ, 19 ಫೆಬ್ರವರಿ 2020 (08:44 IST)
ಕೋಲ್ಕತ್ತಾ: ಯುವತಿಯೊಬ್ಬಳನ್ನು ಕೆಲಸಕ್ಕೆಂದು ಕರೆದುಕೊಂಡು ಬಂದ ಪತ್ನಿ ತನ್ನ ಪತಿಯಿಂದ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾಳೆ ಎಂಬ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಪೊಲೀಸರು ಆರೋಪಿ ದಂಪತಿಯನ್ನು ಬಂಧಿಸಿದ ಘಟನೆ ಕೋಲ್ಕತ್ತಾದ ಬಾಗಜಾಟಿನ್ ನಲ್ಲಿ ನಡೆದಿದೆ.


ತನಗೆ ಮಕ್ಕಳಾಗುವುದಿಲ್ಲ ಎಂಬ ಕಾರಣಕ್ಕೆ ಯುವತಿಯೊಬ್ಬಳನ್ನು ಮನೆಗೆ ಕರೆದುಕೊಂಡು ಬಂದ ಪತ್ನಿ ಆಕೆಯ ಒಪ್ಪಿಗೆಯ ಮೇರೆಗೆ ತನ್ನ ಪತಿಯೊಂದಿಗೆ  ದೈಹಿಕ ಸಂಬಂಧ ಬೆಳೆಸಲು ಹೇಳಿದ್ದಾಳೆ. ಆದರೆ ಅಂದು ಸಂಬಂಧ ಬೆಳೆಸಿದ ಯುವತಿ  ಇದೀಗ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಪತುಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. 


ಈ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ದಂಪತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ