ನೂತನ ಸಚಿವರಿಗೆ ಹೊಸ ಟೈಂ ಟೇಬಲ್ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ

ಶುಕ್ರವಾರ, 7 ಫೆಬ್ರವರಿ 2020 (09:01 IST)
ಬೆಂಗಳೂರು : ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್  ಟೈಂ ಟೇಬಲ್ ವೊಂದನ್ನು ನೀಡಿದ್ದಾರೆ.


ವಾರಕ್ಕೊಂದು ಬಾರಿ 2 ಗಂಟೆ ಟೈಂ ಪಕ್ಷದ ಕಚೇರಿಗೆ ಆಗಮಿಸಿ ಸಭೆಯಲ್ಲಿ ಭಾಗವಹಿಸಿ ಕಾರ್ಯಕರ್ತರ  ಸಮಸ್ಯೆ, ಅಹವಾಲು  ಆಲಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್  ಟೈಂ ಟೇಬಲ್ ಜೊತೆಗೆ ಮೌಖಿಕ ಆದೇಶ ಹೊರಡಿಸಿದ್ದಾರೆ.
ಇದಕ್ಕೆ ಒಪ್ಪಿದ ನೂತನ ಸಚಿವರು ಪಕ್ಷದ ವರಿಷ್ಠರು ಟೈಂ ಟೇಬಲ್ ನೀಡಿದ್ದು,  ಇದನ್ನು ನಾವು ಪಾಲನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ