ಉತ್ತರ ಪ್ರದೇಶದ ಕಾರ್ಮಿಕರನ್ನು ಕರೆತರಲು ಇನ್ನು ಸರ್ಕಾರದ ಒಪ್ಪಿಗೆ ಬೇಕು!

ಸೋಮವಾರ, 25 ಮೇ 2020 (09:48 IST)
ಲಕ್ನೋ: ದೇಶದೆಲ್ಲೆಡೆ ಕೊರೋನಾದಿಂದಾಗಿ ಕಾರ್ಮಿಕರು ಸಂಕಷ್ಟಕ್ಕೀಡಾದ ಹಿನ್ನಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಹೊಸ ಕಾನೂನೊಂದನ್ನು ರೂಪಿಸಲಿದೆ.


ಈಗಾಗಲೇ ಆಯಾ ರಾಜ್ಯಗಳ ವಲಸಿಗರು ಉದ್ಯೋಗ ಕಳೆದುಕೊಂಡು ತಮ್ಮ ಊರಿಗೆ ಮರಳಿದ್ದಾರೆ. ಇನ್ನು ಮುಂದೆ ಉತ್ತರ ಪ್ರದೇಶದ ಕಾರ್ಮಿಕರು ಬೇರೆ ರಾಜ್ಯಕ್ಕೆ ಕೆಲಸಕ್ಕೆಂದು ವಲಸೆ ಹೋಗಬೇಕಾದರೆ ರಾಜ್ಯ ಸರ್ಕಾರದ ಒಪ್ಪಿಗೆ ಬೇಕು.

ಹೀಗೊಂದು ಹೊಸ ಕಾರ್ಮಿಕ ನೀತಿಯನ್ನು ಸಿಎಂ ಯೋಗಿ ನೇತೃತ್ವದ ಸರ್ಕಾರ ಜಾರಿಗೆ ತರಲಿದೆ. ಕಾರ್ಮಿಕರು ನಮ್ಮ ದೊಡ್ಡ ಆಸ್ತಿ. ಯಾವುದೇ ರಾಜ್ಯವೂ ಅವರನ್ನು ಕರೆತರಲು ಬಯಸಿದರೆ ರಾಜ್ಯ ಸರ್ಕಾರದ ಒಪ್ಪಿಗೆ ಪಡೆಯಬೇಕು. ಎಲ್ಲಾ ಕಾರ್ಮಿಕರ ನೋಂದಣಿ ಮಾಡಲಾಗುವುದು. ಈ ಮೂಲಕ ಕಾರ್ಮಿಕರಿಗೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಯೋಗಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ