ಮಗುವಿನ ಮೇಲೆ ಸಿಗರೇಟಿನ ಬರೆ: ಅರೆಸ್ಟ್ ಆದ ಪೊಲೀಸ್ ಅಧಿಕಾರಿ

ಭಾನುವಾರ, 1 ನವೆಂಬರ್ 2020 (09:19 IST)
ರಾಯ್ಪುರ: 2 ವರ್ಷದ ಮಗುವಿನ ಮುಖ, ಮೈಮೇಲೆಲ್ಲಾ ಸಿಗರೇಟಿನಿಂದ ಸುಟ್ಟು ಪೈಶಾಚಿಕ ಕೃತ್ಯ ಮೆರೆದ ಪೊಲೀಸ್ ಅಧಿಕಾರಿಯೊಬ್ಬರನ್ನು ಛತ್ತೀಸ್ ಘಡದಲ್ಲಿ ಬಂಧಿಸಲಾಗಿದೆ.


ಮಗುವಿನ ತಾಯಿಗೆ ಈ ಪೊಲೀಸ್ ಅಧಿಕಾರಿ ಸಾಲ ನೀಡಿದ್ದ. ಸಾಲ ಮರಳಿ ಪಡೆಯಲು ಬಂದಿದ್ದಾಗ ಮಗುವಿನ ಬಳಿ ತನ್ನನ್ನು ಅಪ್ಪ ಎಂದು ಕರೆಯಬೇಕು ಎಂದು ಬಲವಂತ ಮಾಡಿದ್ದಾನೆ. ಮಗು ಪ್ರತಿಕ್ರಿಯಿಸದೇ ಇದ್ದಾಗ ಸಿಗರೇಟಿನಿಂದ ಮೈ, ಮುಖವನ್ನೆಲ್ಲಾ ಸುಟ್ಟಿದ್ದಾನೆ. ಈ ಸಂಬಂಧ ಆತನನ್ನು ಸೇವೆಯಿಂದ ಅಮಾನತುಗೊಳಿಸಿ, ಬಂಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ