ರಾಹುಲ್ ಗಾಂಧಿಗೂ ಪಾಕಿಸ್ತಾನಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದ ಸ್ಮೃತಿ ಇರಾನಿ

Krishnaveni K

ಬುಧವಾರ, 8 ಮೇ 2024 (12:24 IST)
ರಾಯ್ ಬರೇಲಿ: ಲೋಕಸಭೆ ಚುನಾವಣೆಯಲ್ಲಿ ರಾಯ್ ಬರೇಲಿ ಕ್ಷೇತ್ರದಿಂದ ಮತ್ತೊಮ್ಮೆ ಮುಖಾಮುಖಿಯಾಗಿರುವ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದ್ದಾರೆ.

ಇತ್ತೀಚೆಗೆ ಪಾಕಿಸ್ತಾನ ರಾಜಕೀಯ ನಾಯಕರೊಬ್ಬರು ರಾಹುಲ್ ಗಾಂಧಿ ಮುಂದಿನ ಪ್ರಧಾನಿಯಾಗಬೇಕು ಎಂದು ಬೆಂಬಲಿಸಿ ಮಾತನಾಡಿದ್ದರು. ಸ್ಮೃತಿ ಇರಾನಿಯನ್ನು ರಾಹುಲ್ ಸೋಲಿಸಬೇಕು ಎಂದಿದ್ದರು. ಈ ಹಿನ್ನಲೆಯಲ್ಲಿ ಸ್ಮೃತಿ ಇರಾನಿ ಈಗ ರಾಹುಲ್ ಗಾಂಧಿಗೆ ಟಾಂಗ್ ಕೊಟ್ಟಿದ್ದಾರೆ.

‘ಇದುವರೆಗೆ ನಾನು ಕಾಂಗ್ರೆಸ್ ನಾಯಕರೊಬ್ಬರ ವಿರುದ್ಧ ಸ್ಪರ್ಧಿಸಿದ್ದೆ. ಆದರೆ ಈಗ ಪಾಕಿಸ್ತಾನಿ ನಾಯಕರೊಬ್ಬರು ಸ್ಮೃತಿ ಇರಾನಿಯನ್ನು ರಾಹುಲ್ ಸೋಲಿಸಬೇಕು ಎನ್ನುತ್ತಿದ್ದಾರೆ. ಹಾಗಾಗಿ ಪಾಕಿಸ್ತಾನ  ಮತ್ತು ರಾಹುಲ್ ಗಾಂಧಿಗಿರುವ ಸಂಬಂಧವೇನು ಎಂದು ಪ್ರಶ್ನಿಸಲು ಬಯಸುತ್ತೇನೆ. ಚುನಾವಣೆ ಭಾರತದಲ್ಲಿ ನಡೆಯುತ್ತಿದೆ. ಆದರೆ ರಾಹುಲ್ ಗಾಂಧಿಗೆ ಪಾಕಿಸ್ತಾನದಿಂದ ಬೆಂಬಲ ಸಿಗುತ್ತಿದೆ’ ಎಂದು ಸ್ಮೃತಿ ಲೇವಡಿ ಮಾಡಿದ್ದಾರೆ.

ಕಳೆದ ವಾರ ಪ್ರಧಾನಿ ಮೋದಿ ಕೂಡಾ ಕಾಂಗ್ರೆಸ್ ಜೊತೆಗಿನ ಪಾಕ್ ನಂಟಿನ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಗೆಲ್ಲಲಿ ಎಂದು ಪಾಕ್ ನಾಯಕರು ಪ್ರಾರ್ಥನೆ ಮಾಡುತ್ತಿದ್ದಾರೆ. ಪಾಕಿಸ್ತಾನ ಕಾಂಗ್ರೆಸ್ ಯುವರಾಜನನ್ನು ಪ್ರಧಾನಿಯಾಗಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ ಎಂದಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ