ದೇಶದಲ್ಲಿಯೇ ಅತಿ ಹೆಚ್ಚು ಕೊರೊನಾ ಸೋಂಕಿನಿಂದ ಬಲಿಯಾದ ಜಿಲ್ಲೆಗಳ ಪಟ್ಟಿ ಬಿಡುಗಡೆ ಮಾಡಿದ ಕೇಂದ್ರ

ಶುಕ್ರವಾರ, 10 ಜುಲೈ 2020 (08:29 IST)
ನವದೆಹಲಿ : ಕೇಂದ್ರ ಸರ್ಕಾರ ದೇಶದಲ್ಲಿಯೇ ಅತಿ ಹೆಚ್ಚು ಕೊರೊನಾ ಸೋಂಕಿನಿಂದ ಬಲಿಯಾದಂತ ಜಿಲ್ಲೆಗಳ ಪಟ್ಟಿ ಬಿಡುಗಡೆ ಮಾಡಿದೆ.

ದೇಶದಲ್ಲಿ ಶೇ.80ರಷ್ಟು ಜನರು ಕೊರೊನಾ ಸೋಂಕಿನಿಂದ ಸಾವನಪ್ಪಿದ್ದು ಈ 32 ಜಿಲ್ಲೆಗಳಲ್ಲಿಯೇ ಎನ್ನಲಾಗಿದೆ. ಈ ಜಿಲ್ಲೆಗಳ ಪಟ್ಟಿಯಲ್ಲಿ ಕರ್ನಾಟಕದ 2 ಜಿಲ್ಲೆಗಳು ಸೇರಿಕೊಂಡಿವೆ. ಅವು ಯಾವುವುವೆಂದರೆ ಬೆಂಗಳೂರು ಮತ್ತು ಬೀದರ್ ಜಿಲ್ಲೆ.

ದೇಶದಲ್ಲಿ ಕೊರೊನಾಗೆ ಈವರೆಗೆ 21,174 ಮಂದಿ ಸಾವನಪ್ಪಿದ್ದಾರೆ. ಅದರಲ್ಲಿ ಬೆಂಗಳೂರಿನಲ್ಲಿ ಕೊರೊನಾಗೆ 177 ಜನರು ಬಲಿಯಾಗಿದ್ದರೆ, ಬೀದರ್ ನಲ್ಲಿ 49 ಜನರು ಬಲಿಯಾಗಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ