ಟೇಕಾಫ್ ಆಗಬೇಕಿದ್ದ ವಿಮಾನ ಹಾರಾಟಕ್ಕೆ ತಡೆಯೊಡ್ಡಿದ ಇಲಿ

ಬುಧವಾರ, 29 ಜನವರಿ 2020 (06:49 IST)
ವಾರಣಾಸಿ : ಇಲಿಯೊಂದು ಪ್ರಯಾಣ ಬೆಳೆಸಬೇಕಾಗಿದ್ದ ವಿಮಾನದ ಹಾರಾಟವನ್ನು 24 ಗಂಟೆಗಳ ಕಾಲ ತಡೆದು ನಿಲ್ಲಿಸಿದ ಘಟನೆ ಲಾಲ್ ಬಹದ್ದೂರ್ ಶಾಸ್ತ್ರಿ ಏರ್ ಪೋರ್ಟ್ ನಲ್ಲಿ ನಡೆದಿದೆ.

ಶನಿವಾರ ರಾತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಏರ್ ಪೋರ್ಟ್ ನಿಂದ ವಿಮಾನವೊಂದು ಟೇಕಾಫ್ ಆಗಬೇಕಿತ್ತು. ಆದರೆ ಆ ವೇಳೆ ಹೊರಟು ನಿಂತ ವಿಮಾನದೊಳಗೆ ಇಲಿ ನುಗ್ಗಿದ ಕಾರಣ ವಿಮಾನ ಹಾರಾಟವನ್ನು ನಿಲ್ಲಿಸಲಾಗಿದೆ. ಕಾರಣ ಏವಿಯೇಷನ್ ನಿಯಮದ ಪ್ರಕಾರ ವಿಮಾನದಲ್ಲಿ ಇಲಿ ಕಂಡುಬಂದರೆ ಅದು ವೈರ್ ಗಳನ್ನು ಕಟ್ ಮಾಡಿ ಅಪಾಯ ತಂದೊಡ್ಡುವ ಸಂಭವವಿರುವುದರಿಂದ ವಿಮಾನ ಟೇಕಾಫ್ ಮಾಡುವಂತಿಲ್ಲ.

ಆದಕಾರಣ ಅಧಿಕಾರಿಗಳು ವಿಮಾನ ಹಾರಾಟವನ್ನು ತಡೆದು ಪ್ರಯಾಣಿಕರನ್ನು ಹೋಟೆಲ್ ಗೆ ಶಿಫ್ಟ್ ಮಾಡಿ ಇಲಿಯನ್ನು ಹುಡುಕಿ ಹೊರತೆಗೆದು ಬಳಿಕ ಸೋಮವಾರ ಬೆಳಿಗ್ಗೆ ಪ್ರಯಾಣ ಬೆಳೆಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ