ಚೆಂಡು ತರಲು ಹೋದ ಬಾಲಕಿಯ ಮೇಲೆ ಹುಡುಗನೊಬ್ಬ ಮಾಡಿದ್ದೇನು?

ಬುಧವಾರ, 21 ಅಕ್ಟೋಬರ್ 2020 (09:09 IST)
ಆಗ್ರಾ :  ಅಪ್ರಾಪ್ತ ಬಾಲಕನೊಬ್ಬ 5 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಉತ್ತರಪ್ರದೇಶದ ಅಲಿಗರ್ ನಲ್ಲಿ ನಡೆದಿದೆ.

ಬಾಲಕಿ ಚೆಂಡಾಟವಾಡುತ್ತಿದ್ದಾಗ ಚೆಂಡು ಅಪ್ರಾಪ್ತ ಬಾಲಕನ ಮನೆಗೆ ಹೋಗಿದೆ. ಬಾಲಕಿ ಅದನ್ನು ತೆಗೆದುಕೊಂಡು ಬರಲು ಹೋದಾಗ ಬಾಲಕ ಆಕೆಯನ್ನು ಹಿಡಿದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಬಾಲಕನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ಜುವೆನೈಲ್ ಜಸ್ಟೀಸ್  ಮಂಡಳಿಯ ಮುಂದೆ ಹಾಜರುಪಡಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ