ಆಂಧ್ರಪ್ರದೇಶದಲ್ಲಿ ಯಶ್ ಅರೆಸ್ಟ್: ಸಿಎಂ ಜಗನ್ ವಿರುದ್ಧ ಆಕ್ರೋಶ

ಶನಿವಾರ, 23 ಡಿಸೆಂಬರ್ 2023 (09:35 IST)
Photo Courtesy: Twitter
ಹೈದರಾಬಾದ್: ತಾಯಿಯ ಆರೋಗ್ಯ ವಿಚಾರಿಸಲು ವಿದೇಶದಿಂದ ಬಂದ ಯಶ್ ರನ್ನು ಆಂಧ‍್ರ ಪ್ರೊಲೀಸರು ಬಂಧಿಸಿದ್ದು, ಸಿಎಂ ಜಗನ್ ರೆಡ್ಡಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಯಶ್ ನಾವು ನಿಮ್ಮ ಜೊತೆಗಿದ್ದೇವೆ ಎಂದು ಹ್ಯಾಶ್ ಟ್ಯಾಗ್ ನಲ್ಲಿ ಟ್ರೆಂಡ್ ಸೃಷ್ಟಿಸಿ ನೆಟ್ಟಿಗರು ಯಶ್ ಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಯಶ್ ಎಂದ ಕ್ಷಣ ನೀವು ರಾಕಿಂಗ್ ಸ್ಟಾರ್ ಯಶ್ ಎಂದುಕೊಳ್ಳಬೇಕಾಗಿಲ್ಲ.

ಅರೆಸ್ಟ್ ಆಗಿರುವುದು ಅಮೆರಿಕಾದಲ್ಲಿ ಇಂಜಿನಿಯರ್ ಆಗಿರುವ ಅನಿವಾಸಿ ಭಾರತೀಯ ಯಶ್ ಬೌದ್ದುಲೂರಿ. ಅಮೆರಿಕಾದಲ್ಲಿದ್ದುಕೊಂಡೇ ಆಂಧ‍್ರ ಸಿಎಂ ಜಗನ್ ವಿರುದ್ಧವಾಗಿ ನಿರಂತರವಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದರು. ಹೀಗಾಗಿ ದೇಶದ್ರೋಹ ಪ್ರಕರಣ ದಾಖಲಿಸಿ ಅವರನ್ನು ವಿಮಾನ ನಿಲ್ದಾಣದಲ್ಲಿಯೇ ಬಂಧಿಸಿ ಕರೆದೊಯ್ಯಲಾಗಿದೆ.

ಈ ಕಾರಣಕ್ಕೆ ಅವರು ಭಾರತಕ್ಕೆ ಬಂದಿಳಿದ ತಕ್ಷಣ ಅಕ್ರಮವಾಗಿ ಬಂಧಿಸಲಾಗಿದೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ. ಇದು ಜಗನ್ ಸರ್ವಾಧಿಕಾರಿ ಧೋರಣೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ