ಮೊಟ್ಟೆಯ ಗೊಜ್ಜು ತಯಾರಿಸುವುದು ಹೇಗೆ ಗೊತ್ತಾ?

ಬುಧವಾರ, 12 ಆಗಸ್ಟ್ 2020 (08:14 IST)
ಬೆಂಗಳೂರು : ಮೊಟ್ಟೆಯಿಂದ ಹಲವು ಬಗೆಯ ಅಡುಗೆಗಳನ್ನು ಮಾಡಬಹುದು. ಅದೇರೀತಿ ಸರಳವಾಗಿ ಸುಲಭವಾಗಿ ತಯಾರಾಗುವಂತಹ ಮೊಟ್ಟೆಯ ಗೊಜ್ಜನ್ನು ತಯಾರಿಸಿ.

ಬೇಕಾಗುವ ಸಾಮಾಗ್ರಿಗಳು : 1 ಕಪ್ ತೆಂಗಿನಕಾಯಿ ತುರಿ, 11/2 ಇಂಚು ಶುಂಠಿ, 10-15 ಎಸಳು ಬೆಳ್ಳುಳ್ಳಿ, 2 ಚಕ್ಕೆ, 2 ಲವಂಗ, 1 ಈರುಳ್ಳಿ, 2 ಟೊಮೆಟೊ, 2 ಚಮಚ ಮಸಾಲೆ ಸಾಂಬಾರ್ ಪುಡಿ, 4 ಮೊಟ್ಟೆಗಳು, ಉಪ್ಪು, ಕೊತ್ತಂಬರಿ ಸೊಪ್ಪು.

ಮಾಡುವ ವಿಧಾನ : ಮೊದಲಿಗೆ ಮಿಕ್ಸಿಯಲ್ಲಿ ತೆಂಗಿನಕಾಯಿ ತುರಿ, ಶುಂಠಿ, ಬೆಳ್ಳುಳ್ಳಿ, ಚಕ್ಕೆ, ಲವಂಗ, ಟೊಮೆಟೊ ಹಾಕಿ ರುಬ್ಬಿಕೊಳ್ಳಿ. ಬಳಿಕ ೊಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ಆಮೇಲೆ ರುಬ್ಬಿದ ಮಸಾಲೆಯನ್ನು ಹಾಕಿ ಸ್ವಲ್ಪ ನೀರು, ಉಪ್ಪು ಹಾಕಿ ಕುದಿಸಿ ಹಾಕಿ. ಬಳಿಕ 4 ಮೊಟ್ಟೆಗಳನ್ನು ಒಡೆದು ಹಾಕಿ 5 ನಿಮಿಷ ಬೇಯಿಸಿದ ಬಳಿಕ ಕತ್ತಿರಿಸಿಟ್ಟುಕೊಂಡ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಮೊಟ್ಟೆಯ ಗೊಜ್ಜು ರೆಡಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ