ಬಾಳೆಕಾಯಿ ಹಪ್ಪಳದ ರುಚಿ ಕಂಡಿರಾ

ಭಾನುವಾರ, 31 ಮೇ 2020 (13:20 IST)
ಹಪ್ಪಳ ಎಂದರೆ ಕೆಲವು ಆಹಾರ ಪ್ರಿಯರಿಗೆ ಅದೇನೋ ವಿಶೇಷ. ಹಪ್ಪಳ ಇಲ್ಲದಿದ್ದರೆ ಒಂದಷ್ಟು ಮಂದಿ ಊಟವನ್ನೇ ಮಾಡೋದಿಲ್ಲ. ಹಪ್ಪಳ ಪ್ರಿಯರಿಗೆ ಬಾಳೆಕಾಯಿ ಹಪ್ಪಳ ಮಾಡೋ ಟಿಪ್ಸ್ ಇಲ್ಲಿದೆ.

ಏನೇನ್ ಬೇಕು?
ಉದ್ದಿನ ಬೇಳೆ ಅರ್ಧ ಕಿಲೋ
ಬಾಳೆಕಾಯಿ ಡಜನ್
ಎಣ್ಣೆ ಅರ್ಧ ಕಿಲೋ
ಮೆಣಸಿನ ಪುಡಿ 1 ಚಮಚ
ಉಪ್ಪು ರುಚಿಗಾಗಿ
ಅಕ್ಕಿ ಹಿಟ್ಟು 200 ಗ್ರಾಂ

ಮಾಡೋದು ಹೇಗೆ? : ಸಿಪ್ಪೆ ತೆಗೆದ ಬಾಳೆಕಾಯಿ ತಿರುಳನ್ನು ಅರ್ಧ ಸೀಳಿ ನೀರಿನಲ್ಲಿ ಕುದಿಸಬೇಕು. ನೀರನ್ನು ಬೇರೆ ಹಾಕಿ, ಉದ್ದಿನ ಬೇಳೆಯನ್ನು ಹಿಟ್ಟು ಮಾಡಿ ಅದಕ್ಕೆ ಉಪ್ಪು, ಜೀರಿಗೆ ಪುಡಿ, ಖಾರದ ಪುಡಿ ಸೇರಿಸಿ ನೀರಿನಲ್ಲಿ ಗಟ್ಟಿಯಾಗಿ ಕಲಿಸಬೇಕು. ಆ ನಂತರ ಹಿಟ್ಟನ್ನು ಗ್ರೈಂಡ್ ಮಾಡಬೇಕು. ಬೇಯಿಸಿದ ಬಾಳೆಕಾಯಿಯನ್ನು ಸಣ್ಣಗೆ ಮಾಡಿಕೊಂಡು ಹಿಟ್ಟಿಗೆ ಕಲಿಸಬೇಕು. ಸಣ್ಣ ಉಂಡೆಗಳನ್ನು ಮಾಡಿ ಲಟ್ಟಿಸಿ ಬಿಸಿಲಿನಲ್ಲಿ ಒಣಗಿಸಬೇಕು. ಬೇಕು ಎನಿಸಿದಾಗ ಎಣ್ಣೆಯಲ್ಲಿ ಕರಿದರೆ ಬಾಳೆಕಾಯಿ ಹಪ್ಪಳ ಸಿದ್ಧ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ