ಊಟ ಕೊಡಿ ಎಂದು ಬೀದಿ ಬೀದಿ ಅಲೆಯುತ್ತಿರುವ ಬಿಗ್ ಬಾಸ್ ಸ್ಪರ್ಧಿ ಹುಚ್ಚ ವೆಂಕಟ್

ಶುಕ್ರವಾರ, 22 ಡಿಸೆಂಬರ್ 2023 (09:39 IST)
Photo Courtesy: Twitter
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದ, ನಟ ಹುಚ್ಚ ವೆಂಕಟ್ ಈಗ ಬೀದಿ ಬೀದಿ ಅಲೆಯುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬೆಂಗಳೂರಿನ ಕೊಡಿಗೇಹಳ್ಳಿ ಪ್ರದೇಶದಲ್ಲಿ ಹುಚ್ಚ ವೆಂಕಟ್ ಅಲೆದಾಡುತ್ತಿದ್ದು, ಮನೆ ಮನೆಗೆ ಹೋಗಿ ನೀರು ಕೊಡಿ, ಊಟ ಕೊಡಿ ಎಂದು ಕೇಳುತ್ತಿದ್ದಾರೆ ಎಂದು ವ್ಯಕ್ತಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಪ್ರಕಟಿಸಿದ್ದಾರೆ.

ಹುಚ್ಚ ವೆಂಕಟ್ ನನ್ನು ಈ ಪರಿಸ್ಥಿತಿಯಲ್ಲಿ ನೋಡಿ ಬೇಸರವಾಯಿತು. ನನ್ನ ಬಳಿಯಿದ್ದ ಹಣ ನೀಡಿದ್ದೇನೆ. ಊಟ ಕೊಡಿ ಎಂದು ಮನೆ ಮನೆಗೆ ಭಿಕ್ಷೆ ಬೇಡುತ್ತಿದ್ದಾರೆ. ಸದ್ಯಕ್ಕೆ ಕೊಡಿಗೇಹಳ್ಳಿ ಪ್ರದೇಶದಲ್ಲಿದ್ದಾರೆ ಎಂದು ವ್ಯಕ್ತಿಯೊಬ್ಬರು ಬರೆದುಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿದ್ದಾಗ ಸಹ ಸ್ಪರ್ಧಿಗೆ ಹೊಡೆದು ಮನೆಯಿಂದ ಹೊರಬಂದಿದ್ದರು. ಬಳಿಕ ಹಲವು ಬಾರಿ ಈ ರೀತಿ ಬೀದಿ ಬೀದಿ ಅಲೆದಾಡುತ್ತಿದ್ದ ಘಟನೆಗಳು ನಡೆದಿತ್ತು. ಇದೀಗ ಮತ್ತೆ ಅದೇ ರೀತಿ ಮನೆ ಮನೆಗೆ ಹೋಗಿ ಭಿಕ್ಷೆ ಬೇಡುತ್ತಿರುವ ದೃಶ್ಯ ಕಂಡುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ