ಮದುವೆ ನಂತರ ಪತ್ನಿ ಜತೆ ಒತ್ತಡದ ಲೈಂಗಿಕ ಸಂಪರ್ಕ ಮಾಡಿದರೆ ಅದು ಅತ್ಯಾಚಾರ- ದೆಹಲಿ ಹೈಕೋರ್ಟ್

ಗುರುವಾರ, 19 ಜುಲೈ 2018 (07:06 IST)
ನವದೆಹಲಿ : ಮದುವೆ ನಂತರದ ಒತ್ತಡದ ಲೈಂಗಿಕ ಸಂಪರ್ಕವನ್ನು ಅತ್ಯಾಚಾರ ಎಂದು ಪರಿಭಾವಿಸಬಹುದೆ? ಎಂಬ ವಿಚಾರದ ಕುರಿತಾಗಿ ಪರ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಈ ಬಗ್ಗೆ ಹರಿಯಾಣ ಮೂಲದ ಎನ್ ಜಿಒ ಒಂದು ನ್ಯಾಯಾಲಕ್ಕೆ ಸಲ್ಲಿಸಿತ್ತು. ಇದೀಗ ಈ ಅರ್ಜಿಯ ವಿಚಾರಣೆ ಮಾಡಿದ ದೆಹಲಿ ಹೈಕೋರ್ಟ್‌ ತನ್ನ ಅಭಿಪ್ರಾಯವನ್ನು  ವ್ಯಕ್ತಪಡಿಸಿದೆ.


ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್‌ ಮತ್ತು ನ್ಯಾ.ಸಿ.ಹರಿಶಂಕರ್‌ ನೇತೃತ್ವದ ಪೀಠ ಮಂಗಳವಾರ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ‘ಮದುವೆ ಎಂಬ ಸಂಬಂಧದಲ್ಲಿ ಪತಿ ಅಥವಾ ಪತ್ನಿಗೆ ದೈಹಿಕ ಸಂಬಂಧ ಬೇಡ ಎನ್ನುವ ಹಕ್ಕಿದೆ. ಸಮಾಗಮಕ್ಕೆ ಪತ್ನಿಯಾದವಳು ಯಾವತ್ತೂ ಸಿದ್ಧವಾಗಿಯೇ ಇರಬೇಕು ಎಂಬ ನಿಯಮವಿಲ್ಲ. ಪರಸ್ಪರರಲ್ಲಿ ಸಮ್ಮತಿ ಇರಬೇಕಾಗುತ್ತದೆ. ಒತ್ತಾಯದ ಬೇಡಿಕೆಯನ್ನು ಅತ್ಯಾಚಾರ ಎಂದು ಪರಿಭಾವಿಸಬಹುದು’ ಎಂದು ಹೇಳಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ