ಮನೆಯ ಪ್ರಮುಖ ದ್ವಾರಕ್ಕೆ ಎದುರಾಗಿ ಕನ್ನಡಿ ಬೇಡ

ಬುಧವಾರ, 30 ಸೆಪ್ಟಂಬರ್ 2015 (19:17 IST)
ಇಳಯರಾಜ 
 
ಮನೆಯ ಪ್ರವೇಶ ದ್ವಾರವು ಯಾವುದೇ ಅಡ್ಡಿ-ಅಡಚಣೆಗಳಿಲ್ಲದಂತಿರಬೇಕು. ಮನೆಯ ಪ್ರಮುಖ ಸ್ಥಾನ ಇದಾಗಿರುವುದರಿಂದ ಸರಿಯಾದ ಸ್ಥಳದಲ್ಲಿ ಇದು ಇದ್ದರಷ್ಟೇ ಅದೃಷ್ಟ ಹೆಚ್ಚಲು ಸಾಧ್ಯ ಮತ್ತು ಹೊರಗಿನಿಂದ ಒಳ್ಳೆಯ ಊರ್ಜಾ ಶಕ್ತಿ ಒಳಗೆ ಬರಲು ಸಾಧ್ಯ. 
 
ಪ್ರವೇಶ ದ್ವಾರದ ಹೊರಗಾಗಲಿ, ಒಳಗಾಗಲಿ ಯಾವುದೇ ಅಡೆತಡೆಗಳಿರಬಾರದು. ಒಂದು ವೇಳೆ ಇದ್ದರೆ ಬರುವ ಒಳ್ಳೆಯ ಅದೃಷ್ಟ ಕೂಡ ದುರದೃಷ್ಟವಾಗಿ ಪರಿವರ್ತನೆ ಹೊಂದುತ್ತದೆ. ಸರಿಯಾದ ಪ್ರವೇಶ ದ್ವಾರ ಸಾಕಷ್ಟು ಬೆಳಕಿರುವ, ಅಡೆತಡೆಯಿಲ್ಲದ ಸೂಕ್ತ ಕೋಣೆಗೆ ತೆರೆದುಕೊಂಡಿರುವಂತಿರಬೇಕು. 
 
ಬಾಗಿಲಿನ ಬಳಿ ಪಾದರಕ್ಷೆಗಳನ್ನಿಡುವ ಪುಟ್ಟದಾದ ಕಪಾಟು ಮತ್ತಿತರ ಅಡೆತಡೆಗಳನ್ನೂ ಇರಿಸಬಾರದು. ಅದೇ ರೀತಿ, ಪ್ರವೇಶ ದ್ವಾರದ ಎದುರಿಗೇ ಕಟ್ಟಡ, ಕಂಬಗಳು ಇರುವುದು ಕೂಡ ದುರದೃಷ್ಟಕರ. ಇಂಥ ಅಡೆ ತಡೆಯಿದ್ದರೆ ಅದು ಗಂಭೀರವಾದುದು. ಆದುದರಿಂದ ತಕ್ಷಣವೇ ಬಾಗಿಲು ಬದಲಾಯಿಸಬೇಕಾಗುತ್ತದೆ. 
 
ಫ್ಲ್ಯಾಟ್‌ಗಳಲ್ಲಿ ಹೆಚ್ಚಾಗಿ ಪ್ರವೇಶ ದ್ವಾರದ ಹೊರಗೆ ಇಂತಹ ಅಡೆತಡೆಗಳು ಸಾಮಾನ್ಯವಾಗಿರುತ್ತದೆ. ಉದಾಹರಣೆಗೆ ಪ್ರವೇಶ ದ್ವಾರದ ಎದುರಿಗೇ ಮೆಟ್ಟಿಲುಗಳಿರುವುದು. ಹೀಗಿದ್ದರೆ ಆ ಮನೆಯಲ್ಲಿರುವವರಿಗೆ ದೋಷ, ಕಷ್ಟ ನಷ್ಟಗಳು ಸಾಮಾನ್ಯವಾಗಿರುತ್ತದೆ. ಆ ಮೇಲೆ, ಕೆಲವರು ಪ್ರವೇಶ ದ್ವಾರದ ಎದುರಿಗೇ ಕನ್ನಡಿ ಇರಿಸುತ್ತಾರೆ. 
 
ಇದು ಅತ್ಯಂತ ಹಾನಿಕಾರಕವಾಗಿದೆ. ಯಾಕೆಂದರೆ ಪ್ರವೇಶ ದ್ವಾರದ ಮೂಲಕ ಪ್ರವೇಶಿಸುವ ಒಳ್ಳೆಯ ಊರ್ಜಾ ಶಕ್ತಿಯಾದ 'ಚಿ' ಕನ್ನಡಿಗೆ ಬಡಿದು ಹಿಂದಕ್ಕೆ ಹೋಗುತ್ತದೆ. ಆದರೆ ಪ್ರವೇಶ ದ್ವಾರದ ಎದುರಿನ ಗೋಡೆ ಖಾಲಿ ಇರಿಸುವುದು ಸರಿಯಲ್ಲ. ಅಲ್ಲಿ ಆಳವಾಗಿರೋದನ್ನು ಭಾಸವಾಗಿಸುವಂತೆ ಏನಾದರೂ ಇರಿಸಬೇಕಾಗುತ್ತದೆ. 
 
ಅದಕ್ಕಾಗಿ ಕನ್ನಡಿ ಬದಲು ಯಾವುದೇ ಚಿತ್ರಗಳನ್ನು ಅಂಟಿಸಬಹುದು. ಒಂದು ಕಾಲು ಹಾದಿ, ಅಂಕು ಡೊಂಕಾದ ರಸ್ತೆ, ಅದರ ಆಳವಾಗಿ ಒಳಹೊಕ್ಕಂತೆ ಕಾಣಿಸುವ ಚಿತ್ರಗಳನ್ನು ಆ ಗೋಡೆಗೆ ಹಚ್ಚಬಹುದು. ಅಂದರೆ ಸಾಂಕೇತಿಕವಾಗಿ ಆಳದ ಭಾವನೆ ಸೃಷ್ಟಿಸುವಂಥ ಚಿತ್ರಗಳು ಬೇಕು.(ಸಾಧಾರ)

ವೆಬ್ದುನಿಯಾವನ್ನು ಓದಿ