ಕುಜ ದೋಷವಿದ್ದರೆ ಯಾವ ಬಟ್ಟೆ ಧರಿಸಬೇಕು

Krishnaveni K

ಮಂಗಳವಾರ, 7 ಏಪ್ರಿಲ್ 2026 (10:08 IST)
ಜಾತಕದಲ್ಲಿ ಕುಜ ದೋಷವಿದ್ದರೆ ವಿವಾಹಾದಿ ಸಂಬಂಧಗಳಿಗೆ ತೊಂದರೆ, ಮಾನಸಿಕ ನೆಮ್ಮದಿಗೆ ಕೊರತೆಯಾಗುತ್ತದೆ. ಕುಜ ದೋಷವಿದ್ದರೆ ಯಾವ ಬಣ್ಣದ ಬಟ್ಟೆ ಧರಿಸಬೇಕು ತಿಳಿದುಕೊಳ್ಳಿ.

ಅಂಗಾರಕ ದೋಷ ಅಥವಾ ಕುಜ ದೋಷದ ಪರಿಣಾಮವನ್ನು ತಕ್ಕಮಟ್ಟಿಗೆ ಕಡಿಮೆ ಮಾಡಲು ಕೆಂಪು ವಸ್ತ್ರವನ್ನು ಧರಿಸಬೇಕು. ಜ್ಯೋತಿಷ್ಯದ ಪ್ರಕಾರ ಅಂಗಾರಕ ಧೈರ್ಯ, ಸಾಹಸ, ಶಕ್ತಿಯ ಸಂಕೇತ. ಕುಜ ದೋಷವಿದ್ದಾಗ ಕೋಪ, ಕಿರಿ ಕಿರಿಗಳು ಸಾಮಾನ್ಯ.

ವಿಶೇಷವಾಗಿ ಮಂಗಳವಾರಗಳಂದು ಕೆಂಪು ಬಣ್ಣದ ಬಟ್ಟೆ ಧರಿಸಬೇಕು. ಒಂದು ವೇಳೆ ನಿಮಗೆ ಕೆಂಪು ಬಟ್ಟೆ ಧರಿಸಲು ಸಾಧ್ಯವಾಗದೇ ಇದ್ದರೆ ಜೇಬಿನಲ್ಲಿ ಒಂದು ಕೆಂಪು ಕರ್ಚೀಫ್ ಆದರೂ ಇಟ್ಟುಕೊಳ್ಳಿ. ಇದರಿಂದ ನಿಮ್ಮ ಮನಸ್ಸಿನ ವ್ಯಗ್ರತೆ, ಅಸ್ವಸ್ಥೆ ನಿಯಂತ್ರಣಕ್ಕೆ ಬರುವುದು.

ಕೆಂಪು ಬಣ್ಣದ ಜೊತೆ ಕೇಸರಿ, ತವರದ ಬಣ್ಣವಿದ್ದರೂ ಸಮಸ್ಯೆಯಿಲ್ಲ. ವಿಶೇಷವಾಗಿ ಮಂಗಳವಾರ ಹಸಿರು ಬಣ್ಣವನ್ನು ಅವಾಯ್ಡ್ ಮಾಡಿ. ಇದು ಬುಧನ ಬಣ್ಣವಾಗಿದ್ದು ಇದನ್ನು ಧರಿಸುವುದರಿಂದ ತದ್ವಿರುದ್ಧ ಶಕ್ತಿ ಅನುಭವಕ್ಕೆ ಬರುವುದು. ಅದೇ ರೀತಿ ಕಪ್ಪು ಅಥವಾ ಕಡು ನೀಲಿ ಬಣ್ಣವನ್ನು ಧರಿಸುವುದರಿಂದಲೂ ಮಾನಸಿಕ ಒತ್ತಡಗಳು ಕಂಡುಬಂದೀತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ