ಮೆಹೆಂದಿ ಚೆನ್ನಾಗಿ ಕೆಂಪಾಗಲು ಈ ಮನೆಮದ್ದುಗಳನ್ನು ಅನುಸರಿಸಿ

Sampriya

ಭಾನುವಾರ, 11 ಜನವರಿ 2026 (12:27 IST)
Photo Credit X
ಮೆಹೆಂದಿ ಹಚ್ಚಿದ್ದು ಚೆನ್ನಾಗಿ ಕೆಂಪಾಗಲು ಅಥವಾ ಕಪ್ಪಾಗಲು ನೀವು ಈ ಕೆಳಗಿನ ಸುಲಭ ಮತ್ತು ಪರಿಣಾಮಕಾರಿ ಮನೆಮದ್ದುಗಳನ್ನು ಅನುಸರಿಸಬಹುದು. ಇದರಿಂದ ಮತ್ತಷ್ಟು ನಿಮ್ಮ ಮೆಹೆಂದಿ ಬಣ್ಣ ಚೆನ್ನಾಗಿರುತ್ತದೆ. 

   ಕೈಗಳನ್ನು ಸ್ವಚ್ಛಗೊಳಿಸಿ: ಮೆಹೆಂದಿ ಹಚ್ಚುವ ಮೊದಲು ಕೈಗಳನ್ನು ಸೋಪಿನಿಂದ ತೊಳೆದು ಚೆನ್ನಾಗಿ ಒಣಗಿಸಿಕೊಳ್ಳಿ.

   ನೀಲಗಿರಿ ಎಣ್ಣೆ: ಮೆಹೆಂದಿ ಹಚ್ಚುವ ಮೊದಲು ಕೈಗಳಿಗೆ ಸ್ವಲ್ಪ ನೀಲಗಿರಿ ಎಣ್ಣೆಯನ್ನು ಹಚ್ಚಿಕೊಳ್ಳಿ. ಇದು ಬಣ್ಣ ಗಾಢವಾಗಲು ಸಹಾಯ ಮಾಡುತ್ತದೆ.

    ಹೆಚ್ಚು ಸಮಯ ಬಿಡಿ: ಮೆಹೆಂದಿಯನ್ನು ಹಾಕಿದ ಬಳಿಕ ಕನಿಷ್ಠ 5 ರಿಂದ 8 ಗಂಟೆಗಳ ಕಾಲ ಕೈಯಲ್ಲೇ ಬಿಡಿ. ಸಾಧ್ಯವಾದರೆ ರಾತ್ರಿ ಪೂರ್ತಿ ಇಟ್ಟುಕೊಂಡರೆ ಇನ್ನಷ್ಟು ಬಣ್ಣ ಚೆನ್ನಾಗಿ ಬರುತ್ತದೆ. 

ಬಣ್ಣ ಗಾಢಕ್ಕೆ ಕೆಲ ಟಿಪ್ಸ್ ಇಲ್ಲಿದೆ: 
    ಸಕ್ಕರೆ ಮತ್ತು ನಿಂಬೆ ರಸದ ಮಿಶ್ರಣ ಹತ್ತಿಯ ಸಹಾಯದಿಂದ ಮೆಹೆಂದಿಯ ಮೇಲೆ ಹಚ್ಚಿ. ಇದು ಮೆಹೆಂದಿ ಉದುರಿ ಹೋಗದಂತೆ ತಡೆಯುತ್ತದೆ ಮತ್ತು ಬಣ್ಣವನ್ನು ಗಾಢವಾಗಿಸುತ್ತದೆ.

    ಲವಂಗದ ಹಬೆ: ಒಂದು ಹಂಚಿನ ಮೇಲೆ 4-5 ಲವಂಗಗಳನ್ನು ಹಾಕಿ ಬಿಸಿ ಮಾಡಿ. ಆ ಲವಂಗದಿಂದ ಬರುವ ಹಬೆಗೆ ನಿಮ್ಮ ಮೆಹೆಂದಿ ಹಚ್ಚಿದ ಕೈಗಳನ್ನು ತೋರಿಸಿ. ಇದು ಬಣ್ಣ ಕಪ್ಪಾಗಲು ತುಂಬಾ ಸಹಕಾರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ