ಶಿವರಾತ್ರಿಗೆ ಶಿವನಿಗೆ ಪೂಜೆ ಮಾಡುವಾಗ ಹೇಳಬೇಕಾದ ಮಂತ್ರ ಯಾವುದು

Krishnaveni K

ಶನಿವಾರ, 14 ಫೆಬ್ರವರಿ 2026 (08:50 IST)
ನಾಳೆ ಶಿವರಾತ್ರಿಯಾಗಿದ್ದು ಶಿವನಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಶಿವರಾತ್ರಿಯಂದು ಶಿವನಿಗೆ ಪೂಜೆ ಮಾಡುವಾಗ ಹೇಳಬೇಕಾದ ಮಂತ್ರ ಯಾವುದು ಇಲ್ಲಿದೆ ನೋಡಿ.

ಶಿವನಿಗೆ ಶಿವರಾತ್ರಿ ದಿನ ರುದ್ರಾಭಿಷೇಕ, ಜಲಾಭಿಷೇಕ, ಕ್ಷೀರಾಭಿಷೇಕ, ಎಳೆನೀರಿನ ಅಭಿಷೇಕ ಮತ್ತು ಜೇನು ತುಪ್ಪದಿಂದ ಅಭಿಷೇಕ ಮಾಡುವುದು ವಿಶೇಷವಾಗಿದೆ. ಜೊತೆಗೆ ಬಿಲ್ವ ಪತ್ರೆಯಿಂದ ಅರ್ಚನೆ ಮಾಡಿದರೆ ಶಿವನು ಸಂತುಷ್ಟನಾಗುತ್ತಾನೆ.

ನಾಳೆ ದೇವಾಲಯಗಳಿಗೆ ತೆರಳಿ ಈ ಮೇಲೆ ಹೇಳಿದ ಪೂಜೆ ಮಾಡುವಾಗ ತಪ್ಪದೇ ಈ ಮಂತ್ರವನ್ನು ಹೇಳಿ.

ಕರಚರಣ ಕೃತಂ ವಾ ಕಾಯಜಂ ಕರ್ಮಜಂ ವಾ ಶ್ರವಣನಯನಜಂ ವಾ ಮಾನಸ ವಾ ಅಪರಾಧಂ, ವಿಹಿತಂ ವಿಹಿತಂ ವಾ ಸರ್ವ ಮೇತತ್ ಕ್ಷಮಸ್ವ ಜಯ ಜಯ ಕರುಣಾಬ್ದೇ ಶ್ರೀ ಮಹಾದೇವ ಶಂಭೋ

ಇನ್ನು ಮನೆಯಲ್ಲಿ ಭಕ್ತಿಯಿಂದ ರಾತ್ರಿ ಶಿವ ಸ್ಮರಣೆ ಮಾಡುವಾಗ ಶಿವ ಗಾಯತ್ರಿ ಮಂತ್ರವನ್ನು 108 ಬಾರಿ ಜಪಿಸಿ. ಅದು ಇಲ್ಲಿದೆ.

ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರಃ ಪ್ರಚೋದಯಾತ್

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ