ಅಮೀರ್ ಖಾನ್ ಪಿಕೆ ಬಿಡುಗಡೆಗೆ ಇನ್ನು ಟೈಮ್ ಇದೆಯಂತೆ !

ಬುಧವಾರ, 22 ಜನವರಿ 2014 (09:15 IST)
PR
ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ ' ಪಿಕೆ' ಬಿಡುಗಡೆಯು ಮುಂದೂಡಿದೆ. ಈ ಚಿತ್ರವೂ ಈ ವರ್ಷ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪಿಕೆ ಚಿತ್ರದ ಬಿಡುಗಡೆಯು ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ ಎಂಬುದಾಗಿ ಹೇಳಿದ್ದಾರೆ ಚಿತ್ರದ ನಿರ್ಮಾಪಕ. ಅಂದರೆ 2014 ರ ಕ್ರಿಸ್ಮಸ್ ಸಮಯದಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ ನಿರ್ಮಾಪಕರುಗಳಾದ ವಿನೋದ್ ಚೋಪ್ರ ಮತ್ತು ರಾಜ್ ಕುಮಾರ್ ಹಿರಾನಿ. ಈ ಚಿತ್ರವೂ ಜುನ್ ತಿಂಗಳಲ್ಲಿ ಬಿಡುಗಡೆ ಆಗ ಬೇಕಿತ್ತು. ಅಮೀರ್ ಖಾನ್ ಅವರ ಪಿಕೆ ಚಿತ್ರದ ಬಿಡುಗಡೆಯು ಆರು ತಿಂಗಳ ಬಳಿಕ ಬಿಡುಗಡೆ ಆಗುತ್ತಿರುವುದು ಎಲ್ಲರಲ್ಲೂ ಅದರಲ್ಲೂ ಅವರ ಅಭಿಮಾನಿಗಳಲ್ಲಿ ಬೇಸರ ಉಂಟು ಮಾಡಿದೆ. ಅಮೀರ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರವೂ ಬಿಡುಗಡೆಯಲ್ಲಿ ತಡವಾಗುತ್ತಿದೆ. ಕಳೆದ ಒಂದೆರಡು ತಿಂಗಳಿಂದ ಅಮೀರ್ ಖಾನ್ ಧೂಮ್ 3 ಚಿತ್ರದ ಯಶಸ್ಸಿನ ಖುಷಿಯಲ್ಲಿ ಇದ್ದಾರೆ.

ಆದ ಕಾರಣ ಅವರು ಆ ಚಿತ್ರದ ಬಗ್ಗೆಯೇ ಹೆಚ್ಚಿನ ಗಮನ ನೀಡಿದ್ದಾರೆ. ಅದರ ಹಂಚಿಕೆ ಬಗ್ಗೆನೇ ಆದ್ಯತೆ ಕೊಟ್ಟಿದ್ದಾರೆ ಅಮೀರ್ ಖಾನ್. ನಾನಿನ್ನು ಆ ಚಿತ್ರದ ಮೊದಲ ಕಾಪಿಯನ್ನೇ ವೀಕ್ಷಿಸಿಲ್ಲ ಆದ್ದರಿಂದ ಅದರ ಬಗ್ಗೆ ಏನು ಹೇಳಲು ಸಾಧ್ಯವಿಲ್ಲ. ಈ ಚಿತ್ರವೂ ಜೂನ್ ಆರಕ್ಕೆ ಬಿಡುಗಡೆ ಕಾಣುತ್ತಿದೆ, ಅಕಸ್ಮಾತ್ ಅದು ಅಂದು ಬಿಡುಗಡೆ ಆಗಲಿಲ್ಲ ಅಂದರೆ ಅದಕ್ಕೆ ಪೂರಕವಾದ ಮತ್ತಷ್ಟು ಕೆಲಸಗಳನ್ನು ಮಾಡ ಬೇಕಿದೆ ಎಂದಿದ್ದಾರೆ. ಅದನ್ನು ಆದಷ್ಟು ಚೆನ್ನಾಗಿ ಮಾಡುವ ಉದ್ದೇಶ ಇದೆ ಎನ್ನುವ ಮಾತನ್ನು ಹೇಳಿದ್ದಾರೆ ಅಮೀರ್ ಖಾನ್. ಚಿತ್ರದಲ್ಲಿ ಅಮೀರ್ ಜೊತೆ ಅನುಷ್ಕ ಶರ್ಮ ಮತ್ತು ಸುಶಾಂತ್ ಸಿಂಗ್ ರಾಜ್ ಪೂತ್ ಸಹ ನಟಿಸಿದ್ದಾರೆ. ಅಮೀರ್ ಖಾನ್ ಪುತ್ರ ಜುನೈದ್ ರಾಜ್ ಕುಮಾರ್ ಹಿರಾನಿ ಅವರ ಅಸಿಸ್ಟ್ ಮಾಡುತ್ತಿದ್ದಾರೆ. ಹಿರಾನಿ ಈ ಚಿತ್ರದ ನಿರ್ದೇಶಕರು ಆಗಿದ್ದಾರೆ.

ವೆಬ್ದುನಿಯಾವನ್ನು ಓದಿ