ಐಶ್ವರ್ಯ ರೈ ಬಚ್ಚನ್ ಭಾರತೀಯ ಚಿತ್ರರಂಗವನ್ನು ಆಳಿದ ಅಪರೂಪದ ನಟಿ. ಮಾಡೆಲಿಂಗ್ ಪ್ರಪಂಚದಲ್ಲಿ ಮಿಂಚಿ ಮಿಸ್ ವರ್ಲ್ಡ್ ಆಗಿದ್ದ ಈ ಚೆಲುವೆಯನ್ನು ನಿರ್ದೇಶಕ ಮಣಿರತ್ನಂ ಅವರು 1997 ರಲ್ಲಿ ಇರುವರ್ ಚಿತ್ರದ ಮುಖಾಂತರ ಚಲನಚಿತ್ರರಂಗಕ್ಕೆ ಎಂಟ್ರಿ ಕೊಡಿಸಿದರು. ಈ ಚಿತ್ರ ತೆಲುಗು ನಲ್ಲಿ ಇದ್ದರು ಅನ್ನುವ ಹೆಸರಿಂದ ಬಂತು. ಆದರೆ ಆ ಸಿನಿಮ ತೋಪಾದರೂ ಸಹ ಐಶ್ ತನ್ನ ರೂಪ ಲಾವಣ್ಯ ಗಳಿಂದ ಚಿತ್ರರಂಗದಲ್ಲಿ ಹೆಚ್ಚಿನ ಅವಕಾಶ ಪಡೆದುಕೊಂಡರು. ತಮ್ಮನ್ನು ಚಿತ್ರರಂಗಕ್ಕೆ ಪರಿಚಯಿಸಿದ ಮಣಿರತ್ನಂ ಅವರ ಬಗ್ಗೆ ವಿಶೇಷ ಪ್ರೀತಿ ಈಕೆಗೆ.
ಅವರ ಗುರು ಮತ್ತು ವಿಲನ್ ಚಿತ್ರಗಳಲ್ಲೂ ಸಹ ನಟಿಸಿದ್ದಾರೆ ಈ ಚೆಲುವೆ . ಅದಾದ ಬಳಿಕ ತನ್ನ ಪ್ರತಿಭೆಯನ್ನು ಮತ್ತು ನಟನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಆಕೆ ಮತ್ತಷ್ಟು ಬೆಳೆದರು. ಅ ಬಳಿಕ ಅಭಿಷೇಕ್ ಬಚ್ಚನ್ ಜೊತೆ ಮದುವೆ ಆಗಿ ಆರ್ಧ್ಯ್ಲ ತಾಯಿ ಆದ ಬಳಿಕ ಐಶ್ ಯಾವಾಗ ಮತ್ತೆ ಚಿತ್ರರಂಗಕ್ಕೆ ಹಿಂತಿರುಗುತ್ತಾರೆ ಅನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಆಕೆ ಮತ್ತೆ ನಟಿಸಲು ತಾಲೀಮು ಮಾಡಿಕೊಳ್ಳುತ್ತಿದ್ದಾರೆ.
ತನ್ನ ಗುರುವಾದ ಮಣಿರತ್ನಂ ಅವರ ಚಿತ್ರದಲ್ಲಿ ನಟಿಸಿ ತನ್ನ ಎರಡನೆ ಇನ್ನಿಂಗ್ಸ್ ಆರಂಭಿಸ ಬೇಕು ಎಂದು ನಿಶ್ಚಯಿಸಿದ್ದಾಳೆ ಈಕೆ. ಪ್ರಸ್ತುತ ಮಣಿರತ್ನಂ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಭಾರಿ ಮೊತ್ತದ ಸಿನಿಮಾ ಮಾಡಲು ಸಿದ್ಧ ಆಗುತ್ತಿದ್ದಾರೆ. ಅವರ ಈ ಚಿತ್ರದಲ್ಲಿ ಮಹೇಶ್ ಬಾಬು ಮತ್ತು ನಾಗಾರ್ಜುನ ಅಲ್ಲದೆ ತಮಿಳು ಮತ್ತು ಮಲೆಯಾಳಂ ಚಿತ್ರರಂಗದ ಕೆಲವು ಪ್ರಮುಖ ಕಲಾವಿದರನ್ನು ನಟಿಸಲು ಕೇಳಿದ್ದಾರಂತೆ. ಈ ಚಿತ್ರದಲ್ಲಿ ನಟಿಸುವಂತೆ ಐಶ್ ಗು ಸಹ ಆಹ್ವಾನ ನೀಡಿದ್ದಾರಂತೆ ರತ್ನಂ . ಅವರ ಬೇಡಿಕೆಗೆ ಓಕೆ ಅಂದಿದ್ದಾರಂತೆ ಐಶ್.