ಶಾರುಖ್ ಖಾನ್ ಗೆ ಗಾಯ..ಯಾವ ಸ್ಥಳದಲ್ಲಿ ಅಂದ್ರೆ!

ಶುಕ್ರವಾರ, 24 ಜನವರಿ 2014 (09:19 IST)
PR
ಗುರುವಾರ ಶೂಟಿಂಗ್ನಲ್ಲಿ ಗಾಯಗೊಂಡ ಶಾರುಖ್ ಖಾನ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಯಿತು. ಅವರ ಹೊಸ ಚಿತ್ರ ಹ್ಯಾಪಿ ನ್ಯೂ ಇಯರ್ ಚಿತ್ರೀಕರಣದ ಸಮಯದಲ್ಲಿ ಆದ ಸಣ್ಣ ಪ್ರಮಾಣದ ಗಾಯದ ಕಾರಣ ಕಿಂಗ್ ಖಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅವರನ್ನು ಬಿಡುಗಡೆ ಮಾಡಲಾಗಿದ್ದು ವಿಶ್ರಾಂತಿ ಪಡೆದು ಬಳಿಕ ತಮ್ಮ ಕೆಲಸಕ್ಕೆ ವಾಪಾಸಾಗಿದ್ದಾರೆ ಶಾರುಖ್ ಖಾನ್. ಈ ಚಿತ್ರವನ್ನು ಬಾಲಿವುಡ್ ನ ಪ್ರಸಿದ್ಧ ಕೊರಿಯಾಗ್ರಾಫರ್ - ನಿರ್ದೇಶಕಿ ಫರಾ ಖಾನ್ ನಿರ್ದೇಶಿಸುತ್ತಿದ್ದಾರೆ.

ಶೂಟಿಂಗ್ ಸಮಯದಲ್ಲಿ ಶಾರುಖ್ ಅವರ ಹಣೆಗೆ ತಾಕಿ ಗಾಯವಾಯಿತು . ಅವರನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಬಳಿಕ ಚಿಕಿತ್ಸೆ ಪಡೆದ ಶಾರುಖ್ ಮತ್ತೆ ತಮ್ಮ ಕೆಲ್ಸಕ್ಕೆ ವಾಪಾಸಾಗಿದ್ದಾರೆ ಎನ್ನುವ ಮಾಹಿತಿ ಸೆಟ್ನಲ್ಲಿ ಇದ್ದ ಚಿತ್ರತಂಡ ದವರು ತಿಳಿಸಿದ್ದಾರೆ.

ಶಾರುಖ್ ಖಾನ್ ಅವರನ್ನು ಡಾ. ಬಲಾಭೈ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದು ಕೊಂಡು ಹೋಗಲಾಯಿತು. ಗುರುವಾರ ಮಧ್ಯಾಹ್ನ ಅವರಿಗೆ ಚಿಕಿತ್ಸೆ ನೀಡಲಾಯಿತು. ಶಾರುಖ್ ಜೊತೆ ಅವರ ಪತ್ನಿಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಮಯದಲ್ಲಿ ಇದ್ದರು. ಶಾರುಖ್ ಆಸ್ಪತ್ರೆಯಲ್ಲಿ ಇರುವಷ್ಟು ಸಮಯ ಅಲ್ಲಿ ಸಂಪೂರ್ಣವಾದ ಭದ್ರತೆಯ ಏರ್ಪಾಡು ಮಾಡಲಾಗಿತ್ತು.

ವೆಬ್ದುನಿಯಾವನ್ನು ಓದಿ