ಅಲ್ಕೋಹಾಲನ್ನು ಸೇವಿಸಿ ಅದರಿಂದ ಅನೇಕ ಅನಾಹುತಗಳಿಗೆ ಎಡೆ ಮಾಡಿದ ನಟ ಸಲ್ಮಾನ್ ಖಾನ್. ಈ ಕ್ಷಣವು ಅದರಿಂದ ತೊಂದರೆ ಎದುರಿಸುತ್ತಿರುವ ಆ ಸೂಪರ್ ಸ್ಟಾರ್ ಜೀವನದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಯಾರೇ ಆಗಿರಲಿ ಇಂತಹ ತೊಂದರೆ ಎದುರಿಸ ಬಾರದು ಅಷ್ಟೊಂದು ಮಟ್ಟಿಗೆ ಅವರು ತೊಂದರೆ ಎದುರಿಸಿದ್ದಾರೆ ಎಂದೇ ಹೇಳ ಬಹುದು.ಆದರೆ ಇದಕ್ಕೆ ಪೂರಕ ಅನ್ನುವ ಹಾಗೆ ಈಗ ಅಂತಹದೇ ಮತ್ತೊಂದು ಘಟನೆ ನಡದಿದೆ ಬಾಲಿವುಡ್ ನಲ್ಲಿ .ಮಧ್ಯಾನ್ಹದ ವೇಳೆಯಲ್ಲಿ ಇಂತಹ ದುರ್ಘಟನೆ ನಡೆದಿರುವುದು ಬಹಳ ಖೇದಕರ. ಪ್ರಸಿದ್ಧ ನಿರ್ಮಾಪಕರ ಮುದ್ದಿನ ಮಗನಾಗಿರುವ ಈ ನಟನ ಬಗ್ಗೆ ಮಾಧ್ಯಮಗಳು ಹೆಚ್ಚು ಸುದ್ದಿ ಮಾಡಲು ಹೋಗಿಲ್ಲ, ಏಕೆಂದರೆ ಪ್ರಸಿದ್ಧರ ಜೋಬಲ್ಲಿ ದುಡ್ಡು ಜಾಸ್ತಿ ಇರುತ್ತದಲ್ಲ!
ಆದರೆ ಹೇಗೋ ಅದರ ಸುಳಿವು ಮಾಧ್ಯಮದ ಅನೇಕರಿಗೆ ಸಿಕ್ಕಿದೆ. ಆತನ ಹೆಸರು ಹೊರಗೆ ಬರದೆ ಇದ್ದರೂ ಇಂತಹ ಘಟನೆ ನಡೆದ ಬಗ್ಗೆ ಬಿ ಟೌನ್ ಗುಸುಗುಸು ಮಾತನಾಡಿ ಕೊಳ್ಳುತ್ತಿದೆ. ಈ ಘಟನೆ ಒಂದು ವಾರದ ಹಿಂದೆ ನಡೆದಿದೆ. ಅಂದರೆ ಈ ನವನಾಯಕ ವಾರದ ಹಿಂದೆ ಆಕ್ಸಿಡೆಂಟ್ ಮಾಡಿ ತಪ್ಪಿಸಿಕೊಂಡಿದ್ದಾನೆ ಹಾಯಾಗಿ! ಕುಡಿದ ಮತ್ತಿನಲ್ಲಿ ಆ ಯಂಗ್ ಹೀರೋ ಮಾಡಿದ ಅಪಘಾತದಿಂದ ತೀವ್ರವಾದ ಗಾಗೊನ್ದಿರುವ ಬಡಪಾಯಿಯ ಜೀವ ಉಳಿಸುವುದಕ್ಕಿಂತ ಆತನ ತಂದೆ ತನ್ನ ಮಗನನ್ನು ಬಚಾವ್ ಮಾಡುವ ಕಡೆಗೆ ಆದ್ಯತೆ ನೀಡಿದರಂತೆ. ಆತ ಯಾರು ಎನ್ನುವ ಸ್ಪಷ್ಟ ಮಾಹಿತಿ ತಿಳಿದಿಲ್ಲ. ಆದರೆ ಈತನ ಮತ್ತಿನೆತಿಗೆ ಸಿಲುಕಿದ ಆ ಜೀವ ಜೀವನ್ಮರಣದಲ್ಲಿ ಇದೆ.