ಸಲ್ಮಾನ್ ಜೈ ಹೋ ಹೊಣೆ ಹೊತ್ತಿದ್ದಾರೆ .. ಇವರು ರೀಲ್ ಮಾತ್ರವಲ್ಲ ರಿಯಲ್ ನಾಯಕ
ಮಂಗಳವಾರ, 28 ಜನವರಿ 2014 (10:13 IST)
PR
ಕೆಲವರ ಗುಣವೇ ಹಾಗಿರುತ್ತದೆ. ತಾವು ರಜತ ಪರದೆಯ ಮೇಲೆ ಮಾತ್ರ ಹೀರೋ ಆಗಿರಲ್ಲ, ಜೊತೆಗೆ ನಿಜ ಬದುಕಲ್ಲೂ ಸಹ ಹೀರೋ ಆಗಿರುತ್ತಾರೆ. ಆ ಪಟ್ಟಿಗೆ ಸಲ್ಮಾನ್ ಖಾನ್ ಸೇರ್ಪಡೆ ಆಗಿದ್ದಾರೆ. ಅವರು ಬಾಲಿವುಡ್ ಯಶಸ್ವಿ ನಾಯಕರಲ್ಲಿ ಒಬ್ಬರು. ಅವರ ಹೊಸ ಚಿತ್ರ ಜೈ ಹೊ ಅಪಾರ ಯಶಸ್ಸು ನೀಡುತ್ತದೆ ಎನ್ನುವ ಬಾಲಿವುಡ್ ಪಂಡಿತರ ಲೆಕ್ಕಾಚಾರ ತಲೆಕೆಳಗು ಮಾಡಿದ್ದಾರೆ ಪ್ರೇಕ್ಷಕರು. ಅವರ ಜೈಹೊ ಚಿತ್ರ ದಬಾಂಗ್ ನಂತೆ ಹೆಚ್ಚಿನ ಯಶಸ್ಸು ಪಡೆದಿಲ್ಲ. ಚಿತ್ರ ಬಿಡುಗಡೆ ಆದ ದಿನವು ಸಹ ಹೇಳಿಕೊಳ್ಳುವ ಹಣ ಗಳಿಕೆ ಮಾಡಲಿಲ್ಲ .
ಇದನ್ನು ಕಂಡ ಸಲ್ಮಾನ್ ತನ್ನ ಚಿತ್ರದ ಸೋಲಿನ ಹೊಣೆಗೆ ತಾನೇ ಕಾರಣ ಎಂದು ಹೇಳಿದ್ದಾರೆ. ಜೊತೆಗೆ ಅದ್ರ ಭಾರವನ್ನು ತಾವೇ ಹೊರಲು ಸಿದ್ಧ ಆಗಿದ್ದಾರೆ. ಆ ಮುಖಾಂತರ ಅವರ ಒಳ್ಳೆಯತನ ತೋರಿದ್ದಾರೆ. ಇದು ಒಂದು ಕಡೆ, ಆದರೆ ಈ ಚಿತ್ರವನ್ನು ಅವರ ತಮ್ಮ ಸೊಹೈಲ್ ಖಾನ್ ಅವರು ನಿರ್ಮಿಸಿ ನಿರ್ದೇಶಿಸಿದ್ದು ಅದಕ್ಕಾಗಿ ಇಂತಹ ನಿರ್ಧಾರಕ್ಕ್ಕೆ ಬಂದ್ರಾ ಸಲ್ಲು ಗೊತ್ತಿಲ್ಲ! ಆದರು ಅವರು ಒಳ್ಳೆಯದು ಮಾಡಲು ಹೊರಟಿದ್ದಾರೆ ಅದು ತುಂಬಾ ಮುಖ್ಯ. ಈ ಚಿತ್ರವೂ ಈವರೆಗೂ ಗಳಿಕೆ ಮಾಡಿರುವ ಮೊತ್ತ ಕೇವಲ ಹದಿನೇಳು ಕೋಟಿ ರುಪಾಯಿ ಅದು ಸ್ಥಳೀಯ ಬಾಕ್ಸ್ ಆಫೀಸ್ ಮಾರುಕಟ್ಟೆಯಲ್ಲಿ . ನೂರರ ಕ್ಲಬ್ ಬಳಿಗೆ ಹೋಗಲು ಸಾಕಷ್ಟು ಮೊತ್ತ ಕೂಡ ಬೇಕಾಗಿದೆ. ಈ ಚಿತ್ರವು ಈಗ ಸದ್ಯಕ್ಕೆ ಎಪ್ಪತೈದು ಕೋಟಿ ರೂಗಳನ್ನು ಗಳಿಕೆ ಮಾಡಿದೆ. ಭಾರತದೆಲ್ಲೆಡೆ ಈ ಚಿತ್ರ 4,500 ಥಿಯೇಟರ್ ಗಳಲ್ಲಿ ಬಿಡುಗಡೆ ಆಗಿತ್ತು.