ಬಾಲಿವುಡ್‌ಗೆ ಹಾರಿದ ಇರ್ಮಾನ್ ಸರ್ದಾರಿಯಾ

ಸೋಮವಾರ, 11 ಜುಲೈ 2016 (09:33 IST)
ಸ್ಯಾಂಡಲ್ ವುಡ್‌ನಲ್ಲಿ ಹೆಚ್ಚಿನ ಸ್ಟಾರ್ ನಟರನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸಿದ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ. ಕನ್ನಡದಲ್ಲಿ ಅನೇಕ ಸೂಪರ್ ಹಿಟ್ ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿರುವ ಇಮ್ರಾನ್ ಸರ್ದಾರಿಯಾ ಇದೀಗ ಬಾಲಿವುಡ್ ಗೆ ಹಾಡಿದ್ದಾರೆ. 
ಹೌದು..  ಬಾಲಿವುಡ್ ನಲ್ಲಿ ತಯಾರಾಗುತ್ತಿರುವ ಮಷಿನ್ ಸಿನಿಮಾಕ್ಕೆ ಇಮ್ರಾನ್ ಸರ್ದಾರಿಯಾ ಅವರು ಕೊರಿಯಾಗ್ರಫಿ ಮಾಡುತ್ತಿದ್ದಾರಂತೆ.ಅಂದ್ಹಾಗೆ ಮಷಿನ್ ಇಮ್ರಾನ್ ಸರ್ದಾರಿಯಾ ಅವರು ಕೊರಿಯಾಗ್ರಫಿ ಮಾಡುತ್ತಿರುವ ಮೊದಲ ಹಿಂದಿ ಸಿನಿಮಾ. ಈ ಸಿನಿಮಾದಲ್ಲಿ ಕೈರಾ ಅಡ್ವಾಣಿ ಹಾಗೂ ಮುಸ್ತಾಫ ಅನ್ನೋ ಹೊಸ ಪ್ರತಿಭೆ ನಾಯಕ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.ಅಂದ್ಹಾಗೆ ಇದೇ ಮೊದಲ ಬಾರಿಗೆ ಬಾಲಿವುಡ್ ಸಿನಿಮಾಕ್ಕೆ ಕೊರಿಯಾಗ್ರಫಿ ಮಾಡುತ್ತಿರುವ ಖುಷಿಯಲ್ಲಿರುವ ಇಮ್ರಾನ್ ಸರ್ದಾರಿಯಾ ಅವರು ನಾನು ಇಂತಹ ಅವಕಾಶಕ್ಕಾಗಿ ಬಹು ದಿನಗಳಿಂದ ಕಾಯುತ್ತಿದ್ದೆ. ಕನ್ನಡ ಸಿನಿಮಾಗಳಲ್ಲಿನ ನನ್ನ ಕೆಲವು ಕೊರಿಯಗ್ರಫಿ ನೋಡಿ ಅವರು ನನಗೆ ಈ ಸಿನಿಮಾದಲ್ಲಿ ಅವಕಾಶ ನೀಡಿದ್ರು ಅಂತಾ ಅವರು ಹೇಳಿದ್ದಾರೆ.
 
ನಾನು ಈ ಸಿನಿಮಾಕ್ಕೆ ಕೊರಿಯಾಗ್ರಫಿ ಮಾಡುವ ಮೊದಲು ಸಿನಿಮಾದ ಸ್ಕ್ರಿಫ್ಟ್ ಹಾಗೂ ಕ್ಯಾರೆಕ್ಟರ್ ಗಳ ಬಗ್ಗೆ ಸರಿಯಾಗಿ ತಿಳಿದುಕೊಂಡು ಬಳಿಕ ನೃತ್ಯ ನಿರ್ದೇಶನ ಮಾಡಿದೆ. ಈಗಗಾಲೇ ಜಾರ್ಜಿಯಾದಲ್ಲಿ 20 ದಿನಗಳ ಶೂಟಿಂಗ್ ಮುಗಿಸಿದ್ದೇವೆ. ಸಿನಿಮಾದ ಬಗ್ಗೆ ನನಗೆ ಬಹಳ ನಿರೀಕ್ಷೆಗಳಿವೆ ಅಂತಾ ಅವರು ಹೇಳಿದ್ದಾರೆ.
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ