'ನೀರ್ ದೋಸೆ' ಚಿತ್ರಕ್ಕೆ ತಟ್ಟದ ಬಂದ್ ಬಿಸಿ

ಶುಕ್ರವಾರ, 2 ಸೆಪ್ಟಂಬರ್ 2016 (13:48 IST)
ನಟ ಜಗ್ಗೇಶ್ ಹಾಗೂ ಹರಿಪ್ರಿಯಾ ಅಭಿನಯದ ನೀರ್ ದೋಸೆ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಬಂದ್ ನಡುವೆಯೂ ನೀರ್ ದೋಸೆ ಚಿತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ರಸ್ತೆಗಳು ಬಿಕೋ ಎನ್ನುತ್ತಿದ್ದರು ಚಿತ್ರಮಂದಿರಗಳಲ್ಲಿ ನೀರ್ ಬಂದು ನೀರ್ ದೋಸೆ ಚಿತ್ರವನ್ನು ಪ್ರೇಕ್ಷಕರು ವೀಕ್ಷಿಸುತ್ತಿದ್ದಾರೆ. 
ನೀರ್ ದೋಸೆ ಚಿತ್ರದಲ್ಲಿ ಜಗ್ಗೇಶ್, ಹರಿಪ್ರಿಯಾ, ಸುಮನಾ ರಂಗನಾಥ್ ಹಾಗೂ ದತ್ತಣ್ಣ ಸೇರಿದಂತೆ ಹಲವರು ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ ವಿಜಯ್ ಪ್ರಸಾದ್, ಮ್ಯೂಸಿಕ್ ಕಂಪೋಸ್ ಅನೂಪ್ ಅವರದ್ದು. 
ಚಿತ್ರದ ಸಂಭಾಷಣೆ ಅದ್ಭುತವಾಗಿ ಮೂಡಿ ಬಂದಿದ್ದು, ಚಿತ್ರ ಎಲ್ಲರಿಗೂ ಲೈಕ್ ಆಗುತ್ತದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ