ಭುವನೇಶ್ವರ್ ಮಾರಕ ದಾಳಿ, ಅಶ್ವಿನ್ ಶತಕ: ಭಾರತಕ್ಕೆ 2-0ಯಿಂದ ಸರಣಿ ಜಯ
ಸೋಮವಾರ, 15 ಆಗಸ್ಟ್ 2016 (13:39 IST)
ಭಾರತ 3ನೇ ಟೆಸ್ಟ್ ಪಂದ್ಯದ ಅಂತಿಮ ದಿನದಂದು ವೆಸ್ಟ್ ಇಂಡೀಸ್ ತಂಡವನ್ನು 108 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ 237 ರನ್ ಅಂತರದಿಂದ ಜಯಗಳಿಸಿ ಸರಣಿಯನ್ನು 2-0ಯಿಂದ ಗೆದ್ದುಕೊಂಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್ 225 ರನ್‌ಗಳಿಗೆ ಆಲೌಟ್ ಆದ ಬಳಿಕ ಭಾರತ 7 ವಿಕೆಟ್‌ಗೆ 217 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.
ಭಾರತದ ವೇಗಿ ಭುವನೇಶ್ವರ್ ಕುಮಾರ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ವಿಂಡೀಸ್ ಬೇಗನೇ ಔಟಾಯಿತು. ಭುವನೇಶ್ವರ್ 5 ವಿಕೆಟ್ ಕಬಳಿಸಿದರು ಮತ್ತು ಅಶ್ವಿನ್‌ಗೆ 2 ವಿಕೆಟ್ ದಕ್ಕಿತು.
59 ರನ್‌ಗಳೊಂದಿಗೆ ಡೆರೆನ್ ಬ್ರೇವೊ ಸ್ವಲ್ಪ ಪ್ರತಿರೋಧ ತೋರಿದರು. ಭಾರತ ಬೌಲಿಂಗ್‌ನ ವೇಗ ಮತ್ತು ಸ್ಪಿನ್ ಎದುರಿಸಲು ತಾಂತ್ರಿಕವಾಗಿ ಸಜ್ಜಾಗಿರದ ವಿಂಡೀಸ್ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ 108 ರನ್‌ಗಳಿಗೆ ಬೌಲ್ಡ್ ಆಗಿದೆ.
ವಿಂಡೀಸ್ ಎರಡನೇ ಇನ್ನಿಂಗ್ಸ್‌ನಲ್ಲಿ ವೇಗಿ ಮೊಹಮ್ಮದ್ ಶಮಿ ಮಾರಕ ದಾಳಿಯ ಮೂಲಕ 11ಕ್ಕೆ 3 ವಿಕೆಟ್ ಕಬಳಿಸಿದರು. ಇದು ಭಾರತಕ್ಕೆ 2-0 ಸರಣಿ ಜಯ ತಂದುಕೊಟ್ಟಿದೆಯಲ್ಲದೇ ಕ್ಯಾರಿಬಿಯನ್‌ನಲ್ಲಿ ಆಡಿದ 11 ಸರಣಿಗಳಲ್ಲಿ 1ಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದಿರುವುದು ಇದೇ ಮೊದಲಾಗಿದೆ. ಜಮೈಕಾದಲ್ಲಿ ನಾವು ಏನು ತಪ್ಪು ಮಾಡಿದ್ದೇವೆಂದು ಗುರುತಿಸಿ ಇಲ್ಲಿ ಅವುಗಳನ್ನು ಸರಿಪಡಿಸಿಕೊಂಡಿದ್ದಾಗಿ ಕೊಹ್ಲಿ ಹೇಳಿದರು.