Asia Cup Cricket: ಕ್ಯಾತೆ ತೆಗೆದ ಪಾಕಿಸ್ತಾನ ತಂಡಕ್ಕೆ ಅವಮಾನ ಮಾಡಿದ ಟೀಂ ಇಂಡಿಯಾ

Krishnaveni K

ಸೋಮವಾರ, 22 ಸೆಪ್ಟಂಬರ್ 2025 (08:52 IST)
Photo Credit: X
ದುಬೈ: ಏಷ್ಯಾ ಕಪ್ ಕ್ರಿಕೆಟ್ ನ ಸೂಪರ್ ಫೋರ್ ಪಂದ್ಯದಲ್ಲಿ ಮೈದಾನದಲ್ಲಿ ಕ್ಯಾತೆ ತೆಗೆದ ಪಾಕಿಸ್ತಾನಕ್ಕೆ ಟೀಂ ಇಂಡಿಯಾ ಸೋಲಿನ ಬರೆ ಜೊತೆ ಅವಮಾನ ಮಾಡಿ ಕಳುಹಿಸಿದೆ.

ನಿನ್ನೆಯ ಪಂದ್ಯವನ್ನು ಟೀಂ ಇಂಡಿಯಾ 6 ವಿಕೆಟ್ ಗಳಿಂದ ಸೋಲಿಸಿದೆ.  ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಟೀಂ ಇಂಡಿಯಾ 18.5 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಭಾರತದ ಪರ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಅಭಿಷೇಕ್ ಶರ್ಮಾ 74, ಶುಭಮನ್ ಗಿಲ್ 47, ತಿಲಕ್ ವರ್ಮ ಅಜೇಯ 30, ಸಂಜು ಸ್ಯಾಮ್ಸನ್ 13, ಹಾರ್ದಿಕ್ ಪಾಂಡ್ಯ ಅಜೇಯ 7 ರನ್ ಗಳಿಸಿದರು.

ಎಲ್ಲಕ್ಕಿಂತ ಹೆಚ್ಚಾಗಿ ನಿನ್ನೆ ಮೈದಾನದಲ್ಲಿ ಪಾಕಿಸ್ತಾನ ಆಟಗಾರರ ಕಿರಿಕ್ ಮತ್ತು ಟೀಂ ಇಂಡಿಯಾ ಆಟಗಾರರ ಪ್ರತ್ಯುತ್ತರವೇ ಎಲ್ಲ ಗಮನ ಸೆಳೆಯಿತು. ಪಾಕಿಸ್ತಾನ ತಂಡದ ಹ್ಯಾರಿಸ್ ರೌಫ್ ಕೈ ಸನ್ನೆ ಮಾಡಿ ಭಾರತೀಯ ಸೈನಿಕರನ್ನು ಕೆಣಕಿದರು. ಪಾಕ್ ಬೌಲರ್ ಗಳು ಬೇಕೆಂದೇ ಭಾರತೀಯ ಆಟಗಾರರನ್ನು ಕೆಣಕುತ್ತಿದ್ದರು. ಆದರೆ ಅವರಿಗೆ ಭಾರತೀಯ ಆಟಗಾರರು ಮುಖ ಕೂಡಾ ನೋಡದೇ ಆಟದ ಮೂಲಕವೇ ಸೋಲಿನ ಅವಮಾನ ಮಾಡಿ ಕಳುಹಿಸಿದರು.

ಪತ್ರಿಕಾಗೋಷ್ಠಿಯಲ್ಲೂ ಪಾಕಿಸ್ತಾನದ ಜೊತೆಗಿನ ಸ್ಪರ್ಧೆ ಬಗ್ಗೆ ನಮಗೆ ಪ್ರಶ್ನೆಯೇ ಮಾಡಬೇಡಿ ಎಂದು ಸೂರ್ಯಕುಮಾರ್ ಯಾದವ್ ಹೇಳಿದರು. ಯಾಕೆಂದರೆ ನಮಗೆ ಅವರು ಪ್ರತಿಸ್ಪರ್ಧಿಯೇ ಅಲ್ಲ. ಇದು ಏಕಪಕ್ಷೀಯ ಸ್ಪರ್ಧೆ ಎಂದು ಪಾಕಿಸ್ತಾನಕ್ಕೆ ಮಾತಿನ ಮೂಲಕವೂ ಅವಮಾನ ಮಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ