ಭಾರತ ಪಾಕಿಸ್ತಾನ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

Krishnaveni K

ಗುರುವಾರ, 21 ಆಗಸ್ಟ್ 2025 (17:29 IST)
ಮುಂಬೈ: ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವೆಂದರೆ ಅದರ ಉತ್ಸಾಹವೇ ಬೇರೆ ಲೆವೆಲ್ ನಲ್ಲಿರುತ್ತದೆ. ಇದೀಗ ಸಾಂಪ್ರದಾಯಿಕ ಎದುರಾಳಿ ರಾಷ್ಟ್ರಗಳ ಪಂದ್ಯ ನೋಡಲು ಬಯಸುವವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ.

ಸೆಪ್ಟೆಂಬರ್ 9 ರಿಂದ ಯುಎಇನಲ್ಲಿ ಆರಂಭವಾಗಲಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಲೀಗ್ ಪಂದ್ಯವನ್ನು ಆಡಲಿದೆ. ಈ ಪಂದ್ಯ ಸೆಪ್ಟೆಂಬರ್ 14 ರಂದು ನಡೆಯಲಿದೆ. ಪಹಲ್ಗಾಮ್ ದಾಳಿಯ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಸಂಪೂರ್ಣ ಹಳಸಿರುವ ಹಿನ್ನಲೆಯಲ್ಲಿ ಭಾರತ ಪಂದ್ಯ ಬಹಿಷ್ಕರಿಸಬೇಕು ಎಂಬ ಒತ್ತಾಯ ಕೇಳಿಬಂದಿತ್ತು.

ಆದರೆ ಈಗ ಕೇಂದ್ರ ಸರ್ಕಾರ ಈ ಪಂದ್ಯವಾಡುವುದಕ್ಕೆ ಬಿಸಿಸಿಐಗೆ ಅನುಮತಿ ನೀಡಿದೆ. ಉಭಯ ದೇಶಗಳ ನಡುವಿನ ಸರಣಿ ನಿಷೇಧವಾಗಿ ಎಷ್ಟೋ ಕಾಲವಾಗಿದೆ. ಅದಕ್ಕೆ ಇನ್ನೂ ಕೇಂದ್ರ ಒಪ್ಪಿಗೆ ನೀಡಿಲ್ಲ. ಆದರೆ ಈಗ ಏಷ್ಯಾ ಕಪ್ ಟೂರ್ನಿಯಲ್ಲಿ ಮಾತ್ರ ಆಡಲು ಅವಕಾಶ ನೀಡಿದೆ.

ಈ  ನಿರ್ಧಾರ ಕ್ರಿಕೆಟ್ ಮಾತ್ರವಲ್ಲ, ಉಳಿದ ಕ್ರೀಡೆಗಳಿಗೂ ಅನ್ವಯವಾಗಲಿದೆ. ಇದೊಂದು ವಿವಿಧ ತಂಡಗಳು ಭಾಗವಹಿಸುವ ಟೂರ್ನಿಯಾಗಿದ್ದರಿಂದ ಅವಕಾಶ ನೀಡುತ್ತಿದ್ದೇವೆ. ಆದರೆ ಉಭಯ ದೇಶಗಳ ನಡುವಿನ ಸರಣಿಗೆ ಒಪ್ಪಿಗೆಯಿಲ್ಲ. ನಮ್ಮ ತಂಡ ಪಾಕಿಸ್ತಾನಕ್ಕೆ ಹೋಗುವಂತಿಲ್ಲ, ಅದೇ ರೀತಿ ಪಾಕ್ ತಂಡವನ್ನು ನಮ್ಮ ದೇಶದಲ್ಲಿ ಆಡಲು ಅನುಮತಿ ನೀಡಲ್ಲ ಎಂದು ಕ್ರೀಡಾ ಸಚಿವಾಲಯ ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ