ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರು ಭಾನುವಾರ ಸಿಡ್ನಿಯಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದಾರೆ.
ಪಾಕಿಸ್ತಾನ ಸೂಪರ್ ಲೀಗ್ 11ನೇ ಆವೃತ್ತಿಯಲ್ಲಿ ಡೇವಿಡ್ ವಾರ್ನರ್ ಕರಾಚಿ ಕಿಂಗ್ಸ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ.ಟೂರ್ನಿಯ ವಿರಾಮದಲ್ಲಿದ್ದ ವೇಳೆ ಈ ಘಟನೆ ನಡೆದಿದೆ..
ಕರಾಚಿ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿರುವ ವಾರ್ನರ್ ಟೂರ್ನಿಯ ವೇಳಾಪಟ್ಟಿಯ ನಡುವಿನ ವಿರಾಮದ ಸಂದರ್ಭದಲ್ಲಿ ನಾಲ್ಕು ದಿನಗಳ ವಿಶ್ರಾಂತಿಗಾಗಿ ತಮ್ಮ ಸ್ವಂತ ನಗರ ಸಿಡ್ನಿಗೆ ಮರಳಿದ್ದರು. ಆದರೆ, ಅವರು ಇಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಕಾರಣ ಎಡಗೈ ಬ್ಯಾಟ್ಸ್‌ಮನ್ ಅನ್ನು ಅರೆಸ್ಟ್ ಮಾಡಲಾಗಿದೆ ಎಂದು ವರದಿಯಾಗಿದೆ.
ಏಪ್ರಿಲ್ 5ರಂದು ರಾತ್ರಿ ಸುಮಾರು 11:20ಕ್ಕೆ ಸೌತ್ ಡೌಲಿಂಗ್ ಸ್ಟ್ರೀಟ್‌ನಲ್ಲಿ 39ರ ವಯಸ್ಸಿನ ಡೇವಿಡ್ ವಾರ್ನರ್ ಅವರನ್ನು ಯಾದೃಚ್ಛಿಕ ಉಸಿರಾಟ ಪರೀಕ್ಷೆಗಾಗಿ ತಡೆಯಲಾಯಿತು. ಅವರ ಪ್ರಾಥಮಿಕ ರಸ್ತೆ ಪರೀಕ್ಷೆಯಲ್ಲಿ ಮದ್ಯಪಾನ ಮಾಡಿರುವುದು ದೃಡವಾಗಿದ್ದು, ನಂತರ ಅವರನ್ನು ಸರ್ರೆ ಹಿಲ್ಸ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಎರಡನೇ ಬಾರಿ ಉಸಿರಾಟ ವಿಶ್ಲೇಷಣೆ ನಡೆಸಲಾಗಿದೆ ಎಂದು ನ್ಯೂ ಸೌಥ್ ವೇಲ್ಸ್ ಪೊಲೀಸರು ಮಾಹಿತಿ ನೀಡಿದ್ದಾರೆ.