ICC ಮಹಿಳಾ ಏಕದಿನ ವಿಶ್ವಕಪ್‌: ಭಾರತ, ಪಾಕಿಸ್ತಾನ ಪಂದ್ಯಾಟದ ಮಾಹಿತಿ ಇಲ್ಲಿದೆ

Sampriya

ಮಂಗಳವಾರ, 30 ಸೆಪ್ಟಂಬರ್ 2025 (14:50 IST)
Photo Credit X
ಗುವಾಹಟಿ: ಗುವಾಹಟಿಯಲ್ಲಿ ಇಂದು ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025 ಟೂರ್ನಿಗೆ ಅದ್ಧೂರಿ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಭಾರತ ಹಾಗೂ ಶ್ರೀಲಂಕಾ ಎದುರಾಳಿಗಳಾಗಿ ಕಣಕ್ಕಿಳಿಯಲಿದೆ. 

ಟೂರ್ನಿಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸುತ್ತಿದ್ದು, ಭಾರತ ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ. ಇದರೊಂದಿಗೆ 47 ವರ್ಷಗಳ ಕಾಯುವಿಕೆಗೆ ತೆರೆಬೀಳಲಿದೆ. 

12 ವರ್ಷಗಳ ಬಳಿಕ ಪ್ರತಿಷ್ಠಿತ ಟೂರ್ನಿಯು ಭಾರತದಲ್ಲಿ ಆಯೋಜನೆಯಾಗುತ್ತಿದ್ದು, ಭಾರತದ ನಾಲ್ಕು ಕಡೆ ಹಾಗೂ ಶ್ರೀಲಂಕಾದ ಕೊಲಂಬೋದಲ್ಲೂ ಪಂದ್ಯಗಳು ನಡೆಯುತ್ತಿದೆ. 

ಇನ್ನೂ ಪಹಲ್ಗಾಮ್ ದಾಳಿ ಬಳಿಕ ಏಷ್ಯಾ ಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಾಟ ಭಾರೀ ವಿವಾದಕ್ಕೀಡಾಯಿತು. ಇದಿಗ ಮಹಿಳಾ ಐಸಿಸಿ  ವಿಶ್ವಕಪ್‌ನಲ್ಲೂ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲಿದೆ.  ಇನ್ನೂ ವಿಶೇಷತೆಯೆಂನೆಂದರೆ ಈ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ.   ಅಕ್ಟೋಬರ್ 5ರಂದು ಭಾರತ ಹಾಗೂ ಪಾಕಿಸ್ತಾನ ಕೊಲಂಬೊದಲ್ಲಿ ಮುಖಾಮುಖಿಯಾಗಲಿದೆ. 

ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಈ ಟೂರ್ನಿಯಲ್ಲಿ ಮುಖಾಮುಖಿಯಾಗಿ ಆಡಲಿದೆ.

    ಭಾರತದ ಪಂದ್ಯಗಳ ವೇಳಾಪಟ್ಟಿ ಹೀಗಿದೆ;

    ಸೆ.30: ಭಾರತ vs ಶ್ರೀಲಂಕಾ, ಗುವಾಹಟಿ

    ಅ.5: ಭಾರತ vs ಪಾಕಿಸ್ತಾನ, ಕೊಲಂಬೊ

    ಅ.9: ಭಾರತ vs ದ.ಆಫ್ರಿಕಾ, ವಿಶಾಖಪಟ್ಟಣ

    ಅ.12: ಭಾರತ vs ಆಸ್ಟ್ರೇಲಿಯಾ, ವಿಶಾಖಪಟ್ಟಣ

    ಅ.19: ಭಾರತ vs ಇಂಗ್ಲೆಂಡ್, ಇಂದೋರ್

    ಅ.23: ಭಾರತ vs ನ್ಯೂಜಿಲೆಂಡ್, ನವಿ ಮುಂಬೈ

    ಅ.26: ಭಾರತ vs ಬಾಂಗ್ಲಾದೇಶ, ನವಿ ಮುಂಬೈ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ