IPL 2026: ಔಟಾಗಿದ್ದಕ್ಕೆ ಕಣ್ಣೀರು ಹಾಕುತ್ತಾ ಪೆವಿಲಿಯನ್ ಗೆ ಹೋದ ವೈಭವ್ ಸೂರ್ಯವಂಶಿ Video

Krishnaveni K

ಬುಧವಾರ, 8 ಏಪ್ರಿಲ್ 2026 (10:05 IST)
Photo Credit: X
ಗುವಾಹಟಿ: ಐಪಿಎಲ್ 2026 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಆರಂಭ ಪಡೆದೂ ಔಟಾದಾಗ ಬೇಸರಗೊಂಡ ಹಾಲುಗಲ್ಲದ ಹೀರೋ ವೈಭವ್ ಸೂರ್ಯವಂಶಿ ಕಣ್ಣೀರು ಹಾಕುತ್ತಲೇ ಪೆವಿಲಿಯನ್ ಗೆ ಹೋಗಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧ ನಿನ್ನೆ ನಡೆದ ಪಂದ್ಯ ಮಳೆಯಿಂದಾಗಿ 11 ಓವರ್ ಗೆ ಸೀಮಿತವಾಗಿತ್ತು. ರಾಜಸ್ಥಾನ್ ಪರ ಯಶಸ್ವಿ ಜೈಸ್ವಾಲ್, ವೈಭವ್ ಅಬ್ಬರದ ಆರಂಭ ನೀಡಿದ್ದರು. ಮೂರು ಓವರ್ ಗಳಾಗುವಷ್ಟರಲ್ಲಿ ರಾಜಸ್ಥಾನ್ 50 ರನ್ ದಾಟಿತ್ತು.

ಆದರೆ 14 ಎಸೆತಗಳಲ್ಲಿ 39 ರನ್ ಗಳಿಸಿ ಚಚ್ಚಿದ್ದರು. ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದ ವೈಭವ್ ಉತ್ತಮ ಲಯದಲ್ಲಿರುವಾಗಲೇ ಶ್ರಾದ್ಧೂಲ್ ಠಾಕೂರ್ ಎಸೆತದಲ್ಲಿ ತಿಲಕ್ ವರ್ಮಗೆ ಕ್ಯಾಚಿತ್ತರು. ಆದರೆ ಔಟಾದಾಗ ವೈಭವ್ ದುಃಖ ಹೇಳತೀರದಾಗಿತ್ತು.

ತೀವ್ರ ನಿರಾಶೆಗೊಳಗಾದ ಅವರಿಗೆ ಪೆವಿಲಿಯನ್ ಗೆ ಹೋಗುವಾಗ ಕಣ್ಣಲ್ಲಿ ನೀರು ಸುರಿಯುತ್ತಿತ್ತು. ಜೊತೆಗೆ ಹತಾಶೆಯಿಂದ ಚಿಕ್ಕ ಮಕ್ಕಳಂತೆ ಬ್ಯಾಟ್ ಕುಕ್ಕಿ ತೆರಳಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

pic.twitter.com/853HmNHlXO

 

— Sonu (@Cricket_live247) April 8, 2026

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ