ಧೋನಿ ಮುಂಚೆ ಆಡಿದ ಹಾಗೆ ಆಡುತ್ತಿಲ್ಲ: ಅಜರುದ್ದೀನ್

ಸೋಮವಾರ, 12 ಅಕ್ಟೋಬರ್ 2015 (13:44 IST)
ಭಾರತದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಕಳಪೆ ಫಾರಂ ಕುರಿತು ಭಾರತದ ಮಾಜಿ ನಾಯಕ ಮಹಮ್ಮದ್ ಅಜರುದ್ದೀನ್ ಟೀಕಿಸಿದ್ದು, ಅವರು ಮುಂಚಿನ ರೀತಿಯಲ್ಲಿ ಆಡುತ್ತಿಲ್ಲ ಎಂದು ಹೇಳಿದ್ದಾರೆ.

ಧೋನಿ ನಾಯಕರಾಗಿದ್ದು ಅವರ ಮೇಲೆ ಭಾರೀ ಒತ್ತಡ ಇರುತ್ತದೆ. ಅವರು ಸರಿಯಾಗಿ ಪ್ರದರ್ಶನ ನೀಡದಿದ್ದರೆ ಆಯ್ಕೆದಾರರು ನಾಯಕತ್ವ ಬದಲಾವಣೆ ಕುರಿತು ಯೋಚಿಸಬೇಕಾಗುತ್ತದೆ. ಧೋನಿ ಪರಿಣಾಮ ಬೀರಬೇಕೆಂದರೆ ಮೇಲಿನ ಕ್ರಮಾಂಕದಲ್ಲಿ ಆಡಬೇಕು. ಡ್ರೆಸಿಂಗ್ ರೂಂನಲ್ಲಿ ಧೋನಿ ಅಗತ್ಯಕ್ಕೆ ತಕ್ಕಂತೆ ಆಡುತ್ತಿದ್ದಾರೆಂದು ಅರಿವಾದರೆ, ಉಳಿದವರು ಅವರನ್ನು ಹಿಂಬಾಲಿಸುತ್ತಾರೆ ಎಂದು ಅಜರುದ್ದೀನ್ ಹೇಳಿದರು.
 
 ಭಾರತ ಫಿನಿಷರ್‌ಗಳ ಕೊರತೆ ಎದುರಿಸುತ್ತಿದೆಯೇ ಎಂಬ ಪ್ರಶ್ನೆಗೆ ಫಿನಿಷರ್ ಎಂಬ ಪದಕ್ಕೆ ಹೆಚ್ಚು ಅರ್ಥ ಕಲ್ಪಿಸಲಾಗಿದೆ ಎಂದು ಪ್ರತಿಕ್ರಿಯಿಸಿದರು. ಫಿನಿಷರ್ ಎಂಬ ಪದದ ಅರ್ಥವೇನು ಎಂದು ನನಗೆ ನಿಖರವಾಗಿ ಗೊತ್ತಾಗುತ್ತಿಲ್ಲ. ಪ್ರತಿಯೊಬ್ಬರಿಗೂ ಪಂದ್ಯ ಫಿನಿಷಿಂಗ್ ಮಾಡುವ ಕೌಶಲ್ಯ ಇರಬೇಕು.

ಗೆಲುವಿಗೆ 50 ರನ್ ಅಗತ್ಯವಿರಬೇಕಾದರೆ 70 ಪ್ಲಸ್‌ನಲ್ಲಿ ಬ್ಯಾಟಿಂಗ್ ಆಡುತ್ತಿರುವವರು ಬೇರೆಯವರಿಗೆ ಆಟದ ಫಿನಿಷಿಂಗ್ ಬಿಡುವುದೇ. ನೀವು ಕ್ರೀಸ್‌ನಲ್ಲಿದ್ದರೆ ಭಾರತಕ್ಕೆ ಗೆಲುವು ತಂದುಕೊಡುವುದು ನಿಮ್ಮ ಕರ್ತವ್ಯ ಎಂದು ಹೇಳಿದರು. 
 

ವೆಬ್ದುನಿಯಾವನ್ನು ಓದಿ