ರೋಜರ್ ಬಿನ್ನಿಗೆ ಎದುರಾಗಿದೆ ಹಿತಾಸಕ್ತಿ ಸಂಘರ್ಷದ ಪ್ರಶ್ನೆ

ಶುಕ್ರವಾರ, 30 ಅಕ್ಟೋಬರ್ 2015 (16:29 IST)
ಮುಂಬೈ: ಬಿಸಿಸಿಐನಲ್ಲಿ ಅಪ್ಪ ಆಯ್ಕೆ ಸಮಿತಿಯಲ್ಲಿದ್ದು ಪುತ್ರ  ಕ್ರಿಕೆಟ್ ಆಟಗಾರನಾಗಿದ್ದರೆ  ಹಿತಾಸಕ್ತಿ ಸಂಘರ್ಷದ ಪ್ರಶ್ನೆ ಎದುರಾಗುತ್ತದೆ. ಟೀಂ ಇಂಡಿಯಾದ ಮಾಜಿ ವೇಗದ ಬೌಲರ್ ರೋಜರ್ ಬಿನ್ನಿ ಮತ್ತು ಅವರ ಪುತ್ರ ಸ್ಟುವರ್ಟ್ ಬಿನ್ನಿ ವಿಚಾರದಲ್ಲೂ ಅದೇ ಸಮಸ್ಯೆ ಎದುರಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮಾಲೀಕರಾಗಿ ಮತ್ತು ಬಿಸಿಸಿಐ ಅಧ್ಯಕ್ಷರಾಗಿ ಶ್ರೀನಿವಾಸನ್‌ ಕೂಡ ಹಿತಾಸಕ್ತಿ ಸಂಘರ್ಷದ ಪ್ರಶ್ನೆ ಎದುರಿಸಿದ್ದರು.

 ಶಶಾಂಕ್ ಮನೋಹರ್ ಬಿಸಿಸಿಐ ಅಧ್ಯಕ್ಷರಾದ ಮೇಲೆ ಕ್ರಿಕೆಟ್ ಮಂಡಳಿಯ ಕುಂದಿದ ಇಮೇಜ್‌ಗೆ ಮತ್ತೆ ಮೆರುಗು ನೀಡುವುದಕ್ಕೆ ಕ್ಲೀನ್ ಅಪ್ ಕಾರ್ಯಾಚರಣೆಗೆ ಇಳಿದಿದ್ದಾರೆ. 
 ಅವುಗಳ ಪೈಕಿ ಹಿತಾಸಕ್ತಿ ಸಂಘರ್ಷದ ವಿವಾದಾತ್ಮಕ ವಿಷಯವೂ ಒಂದಾಗಿದೆ.  ಮನೋಹರ್ 29 ಅಂಶಗಳ ಕಾರ್ಯಸೂಚಿಯನ್ನು ಕ್ಲೀನ್ ಅಪ್ ಕಾರ್ಯಾಚರಣೆ ಭಾಗವಾಗಿ ಇಟ್ಟುಕೊಂಡಿದ್ದಾರೆ.

ಮನೋಹರ್ ಅವರ ಸುಧಾರಣೆಗಳ ಪೈಕಿ ರಾಷ್ಟ್ರೀಯ ಆಯ್ಕೆದಾರರು ಆಟಗಾರರ ಜತೆ ಯಾವುದೇ ಹಣಕಾಸು ಅಥವಾ ಉದ್ಯಮ ಹಿತಾಸಕ್ತಿ ಇಟ್ಟುಕೊಳ್ಳಬಾರದು. ಹೀಗಾಗಿ ಈ ವಿಷಯ ತಂದೆ-ಮಗ ರೋಜರ್ ಮತ್ತು ಸ್ಟುವರ್ಟ್ ಬಿನ್ನಿ ಅವರತ್ತ ಗಮನಹರಿಸಿದೆ. ಸ್ಟುವರ್ಟ್ ಭಾರತದ ಏಕದಿನ ಮತ್ತು ಟೆಸ್ಟ್ ತಂಡಗಳ ಆಟಗಾರ.  ಆದರೆ ಈಗ ರೋಜರ್ ಬಿನ್ನಿ ಅವರು ಆಯ್ಕೆ ಸಮಿತಿಯಲ್ಲಿರುವುದು ಸಮಸ್ಯಾತ್ಮಕವಾಗಿದ್ದು, ಹಿತಾಸಕ್ತಿ ಸಂಘರ್ಷಕ್ಕೆ ಎಡೆಯಾಗುವುದನ್ನು ತಪ್ಪಿಸಲು ಹುದ್ದೆ ತ್ಯಜಿಸುವಂತೆ ರೋಜರ್ ಬಿನ್ನಿಗೆ ಸೂಚಿಸಬಹುದು.   ಹಿತಾಸಕ್ತಿ ಸಂಘರ್ಷದ ಪ್ರಶ್ನೆ ತಪ್ಪಿಸುವುದಕ್ಕಾಗಿ ಮನೋಹರ್ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಅವರ ಪುತ್ರ ಅದ್ವೈತ್ ಬಿಸಿಸಿಐನ ಸ್ಥಾನವನ್ನು ತ್ಯಜಿಸಿದ್ದರು. 

ವೆಬ್ದುನಿಯಾವನ್ನು ಓದಿ