ಎರಡು ನೋಬಾಲ್‌ಗಳಿಂದ ಟೀಂ ಇಂಡಿಯಾಗೆ ಕೈತಪ್ಪಿತು ಗೆಲ್ಲುವ ಅವಕಾಶ

ಶುಕ್ರವಾರ, 1 ಏಪ್ರಿಲ್ 2016 (11:05 IST)
ಬದಲಿ ಆಟಗಾರನಾಗಿ ಬಂದ ಲೆಂಡ್ಲ್  ಸಿಮ್ಮನ್ಸ್ ಅವರ  ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತದ ವಿರುದ್ಧ ಕೊನೆಯ ಓವರಿನಲ್ಲಿ ವೆಸ್ಟ್ ಇಂಡೀಸ್ ರೋಚಕ ಗೆಲುವನ್ನು ಗಳಿಸಿ ವಿಶ್ವ 20 ಟ್ವೆಂಟಿ ಫೈನಲ್ ಪ್ರವೇಶಿಸಿದೆ. ಸಿಮ್ಮನ್ಸ್ ಅವರು ವಾಂಖಡೆ ಸ್ಟೇಡಿಯಂನಲ್ಲಿ ಎರಡು ಬಾರಿ 18 ಮತ್ತು 50 ರನ್‌ಗಳಿದ್ದಾಗ ಕ್ಯಾಚ್ ನೀಡಿ ಔಟಾಗಿದ್ದರು. ಆದರೆ ಎರಡೂ ಬಾರಿಯೂ ಬೌಲರ್‍‍‌ಗಳು ಕ್ರೀಸ್ ಆಚೆ ಕಾಲನ್ನಿಟ್ಟು ನೋಬಾಲ್ ಮಾಡಿದ್ದರಿಂದ ಆತಿಥೇಯ ರಾಷ್ಟ್ರ ಬೌಲರುಗಳ ತಪ್ಪಿನಿಂದಾಗಿ ಭಾರಿ ಬೆಲೆ ತೆರಬೇಕಾಯಿತು. 
 
 ಭಾರತ ವೆಸ್ಟ್ ಇಂಡೀಸ್ ವಿರುದ್ಧ ಸರಿಯಾದ ದಿಕ್ಕಿನಲ್ಲಿ ಬೌಲಿಂಗ್ ದಾಳಿ ಮಾಡಿತ್ತು. ಆದರೆ ಎರಡು ಸಣ್ಣ ತಪ್ಪುಗಳು ಟೀಂ ಇಂಡಿಯಾಗೆ ಮಾರಕವಾಗಿ ಪರಿಣಮಿಸಿತು. ರವಿಚಂದ್ರನ್ ಅಶ್ವಿನ್ ಮತ್ತು ಹಾರ್ದಿಕ್ ಪಾಂಡ್ಯಾ ಅವರ ಎರಡು ನೋಬಾಲ್‌ಗಳು ಇದಕ್ಕೆ ಕಾರಣ. ಇದು ಧೋನಿ ಬಳಕ್ಕೆ ಪಂದ್ಯಾವಳಿಯನ್ನು ಎರಡನೇ ಬಾರಿಗೆ ಗೆಲ್ಲುವ ಅವಕಾಶ ಕೈತಪ್ಪಿ ಏಳು ವಿಕೆಟ್‌ಗಳಿಂದ ಭಾರತ ಸೋಲಪ್ಪಿತು. 
 
ಏಳನೇ ಓವರಿನಲ್ಲಿ ಅಶ್ವಿನ್ ಅವರ 5ನೇ ಎಸೆತದಲ್ಲಿ ಸಿಮ್ಮನ್ಸ್ ಹೊಡೆದ ಚೆಂಡು  ಶಾರ್ಟ್ ಥರ್ಡ್ ಮ್ಯಾನ್‌ನಲ್ಲಿದ್ದ ಬುಮ್ರಾ ಕೈಸೇರಿತು. ವಾಂಖಡೆ ಸ್ಟೇಡಿಯಂ ಸಂತೋಷ, ಸಡಗರದಲ್ಲಿ ಮುಳುಗಿತು. ಆದರೆ ಆದರೆ ಅಶ್ವಿನ್ ಕ್ರೀಸ್ ಮುಂದೆ ಹೆಜ್ಜೆ ಇಟ್ಟು ಬೌಲಿಂಗ್ ಮಾಡಿರುವುದು ರೀಪ್ಲೇನಲ್ಲಿ ಸಾಬೀತಾಗಿದ್ದರಿಂದ ಅಂಪೈರ್ ನೋಬಾಲ್ ಡಿಕ್ಲೇರ್ ಮಾಡಿದಾಗ ಕ್ರೀಡಾಂಗಣದಲ್ಲಿ ನೀರವ ಮೌನ ಆವರಿಸಿತು.

 15 ನೇ ಓವರಿನ ಕೊನೆಯ ಎಸೆತದಲ್ಲಿ ಪಾಂಡ್ಯಾ ಬೌಲಿಂಗ್‌ನಲ್ಲಿ ಸಿಮ್ಮನ್ಸ್ ಬಾರಿಸಿದ ಚೆಂಡನ್ನು ಅಶ್ವಿನ್ ಕ್ಯಾಚ್ ಹಿಡಿದರು. ಆದರೆ ಅದೂ ಕೂಡ ನೋ ಬಾಲ್ ಎಂದು ಡಿಕ್ಲೇರ್ ಮಾಡಿದ್ದರಿಂದ ಸಿಮ್ಮನ್ಸ್ ಅವರನ್ನು ಔಟ್ ಮಾಡುವ ಅವಕಾಶ ಕೈತಪ್ಪಿತು.  ಸಿಮ್ಮನ್ಸ್ ಕೊನೆಗೆ 51 ಎಸೆತಗಳಲ್ಲಿ 82ರನ್ ಬಾರಿಸಿ ವಿಂಡೀಸ್‌ಗೆ ಅಚ್ಚರಿಯ ಗೆಲುವನ್ನು ತಂದುಕೊಟ್ಟರು. 
 

ವೆಬ್ದುನಿಯಾವನ್ನು ಓದಿ