ವಿಶ್ವದ ನಂ 1 ಬೌಲರ್ ಬುಮ್ರಾಗೇ ವೈಭವ್ ಸೂರ್ಯವಂಶಿ ಇಂಥಾ ಟ್ರೀಟ್ಮೆಂಟ್ ಕೊಡೋದಾ Video
ಮುಂಬೈ ಇಂಡಿಯನ್ಸ್ ವಿರುದ್ಧ ನಿನ್ನೆ ನಡೆದ ಪಂದ್ಯ ಮಳೆಯಿಂದಾಗಿ 11 ಓವರ್ ಗೆ ಸೀಮಿತವಾಗಿತ್ತು. ರಾಜಸ್ಥಾನ್ ಪರ ಯಶಸ್ವಿ ಜೈಸ್ವಾಲ್, ವೈಭವ್ ಅಬ್ಬರದ ಆರಂಭ ನೀಡಿದ್ದರು. ಮೂರು ಓವರ್ ಗಳಾಗುವಷ್ಟರಲ್ಲಿ ರಾಜಸ್ಥಾನ್ 50 ರನ್ ದಾಟಿತ್ತು.
ವೈಭವ್ ಸೂರ್ಯವಂಶಿ ಕೇವಲ 14 ಎಸೆತಗಳಲ್ಲಿ 39 ರನ್ ಚಚ್ಚಿದ್ದರು. ಅದರಲ್ಲೂ ಜಸ್ಪ್ರೀತ್ ಬುಮ್ರಾ ವಿಶ್ವದ ಶ್ರೇಷ್ಠ ಬೌಲರ್. ಅವರ ಬೌಲಿಂಗ್ ನಲ್ಲಿ ಘಟಾನುಘಟಿ ಬ್ಯಾಟಿಗರೇ ರನ್ ಗಳಿಸಲು ಪರದಾಡುತ್ತಾರೆ. ಆದರೆ ವೈಭವ್ ಸ್ವಲ್ಪವೂ ಭಯವಿಲ್ಲದೇ ಎರಡು ಬಿಗ್ ಸಿಕ್ಸರ್ ಸಿಡಿಸಿದ್ದಾರೆ.
ಅದೂ ಕೇವಲ 3 ಎಸೆತಗಳ ಅಂತರದಲ್ಲಿ ಎರಡು ದೊಡ್ಡ ಸಿಕ್ಸರ್ ಸಿಡಿಸಿದ್ದರು. ಇತ್ತ ಈ ಎರಡು ಸಿಕ್ಸರ್ ನೋಡಿ ಸ್ವತಃ ಬುಮ್ರಾ ಮುಖ ಕಿವುಚಿಕೊಂಡರು. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು ವಿಶ್ವ ನಂಬರ್ 1 ಬೌಲರ್ ಗೆ ಸ್ವಲ್ಪವೂ ರೆಸ್ಪೆಕ್ಟ್ ಕೊಡಲಿಲ್ಲ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.