ರಾಷ್ಟ್ರೀಯ ತಂಡಕ್ಕೆ ಆಡಲು ವೀರೇಂದ್ರ ಸೆಹ್ವಾಗ್ ಲವಲವಿಕೆ

ಶುಕ್ರವಾರ, 11 ಏಪ್ರಿಲ್ 2014 (16:29 IST)
ನವದೆಹಲಿ: ಕೆಲವು ಕೆಟ್ಟ ಪ್ರದರ್ಶನಗಳ ನಂತರ ಭಾರತದ ಕ್ರಿಕೆಟ್ ತಂಡದಿಂದ ಕಳೆದ ವರ್ಷ ಹೊರಬಿದ್ದ ದೆಹಲಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ರಾಷ್ಟ್ರೀಯ ತಂಡಕ್ಕೆ ಪುನಃ ಆಡುವ ಬಗ್ಗೆ ಲವಲವಿಕೆಯಿಂದ ಇದ್ದಾರೆ. ಯುಎಇನಲ್ಲಿ ಏಪ್ರಿಲ್ 16ರಂದು ಏಳನೇ ಐಪಿಎಲ್ ಆವೃತ್ತಿ ಆರಂಭವಾದಾಗ ತಾವು ಹೆಸರು ಪಡೆದಿದ್ದ ದಾಳಿಯ ಶೈಲಿಯಲ್ಲೇ ಆಟವನ್ನು ಮುಂದುವರಿಸಲು ನಜಾಬ್‌‌ಗಢ ನವಾಬ ಯೋಜಿಸಿದ್ದಾರೆ.2014ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಸೆಹ್ವಾಗ್ ಅವರನ್ನು 3.2ಕೋಟಿ ರೂ.ಗೆ ಖರೀದಿಸಿದ್ದು, ದೆಹಲಿಯ ಪರ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಟಚ್‌ನಲ್ಲಿದ್ದಾರೆ.ಅವರು 35 ಚೆಂಡುಗಳಿಗೆ 67 ರನ್ ಬಾರಿಸಿ ಸೈಯದ್ ಮುಸ್ತಾಕ್ ಅಲಿ ಟಿ20 ಟ್ರೋಫಿ ಪಂದ್ಯದಲ್ಲಿ ದೆಹಲಿಗೆ ಪಂಜಾಬ್‌ ವಿರುದ್ಧ 6 ವಿಕೆಟ್ ಮುನ್ನಡೆ ದೊರಕಿಸಿಕೊಟ್ಟರು.

ಅಬು ದಾಬಿಯಲ್ಲಿ ನಡೆದ ಚಾಂಪಿಯನ್ ಕೌಂಟಿ ಟೆಸ್ಟ್ ಪಂದ್ಯದಲ್ಲಿ ಕೂಡ 97 ಎಸೆತಗಳಲ್ಲಿ 109 ರನ್ ಬಾರಿಸುವ ಮೂಲಕ ಡರ್ಹಾಮ್ ವಿರುದ್ಧ ಎಂಸಿಸಿಗೆ 6 ವಿಕೆಟ್ ಜಯ ಗಳಿಸಿಕೊಟ್ಟಿದ್ದರು.ಕಳೆದ ಋತುವಿನಲ್ಲಿ ನಾನು ರನ್ ಸ್ಕೋರ್ ಮಾಡಲಿಲ್ಲ.

ವೆಬ್ದುನಿಯಾವನ್ನು ಓದಿ