ಸೀನಿಯರ್ ಬೌಲರ್ ಎನಿಸಿಕೊಳ್ಳುವುದು ಗೌರವ ಎಂದ ಅಮಿತ್ ಮಿಶ್ರಾ

ಭಾನುವಾರ, 23 ಅಕ್ಟೋಬರ್ 2016 (11:11 IST)
ಮೊಹಾಲಿ: ಭಾರತ ಕ್ರಿಕೆಟ್ ತಂಡದಲ್ಲಿ ಈಗ ರವಿಚಂದ್ರನ್ ಅಶ್ವಿನ್ ವಿಶ್ರಾಂತಿ ಪಡೆದಿದ್ದಾರೆ. ಹೀಗಾಗಿ ಸ್ಪಿನ್ ಬೌಲಿಂಗ್ ಜವಾಬ್ದಾರಿ ಹಿರಿಯ ಅಮಿತ್ ಮಿಶ್ರಾ ಹೆಗಲಿಗೇರಿದೆ.

ಆದರೆ ಈ ಜವಾಬ್ದಾರಿಯನ್ನು ಸಂತೋಷದಿಂದ ಅನುಭವಿಸುತ್ತಿರುವುದಾಗಿ ಮಿಶ್ರಾ ಹೇಳಿಕೊಂಡಿದ್ದಾರೆ. ಓವರ್ ಗಳ ಮಧ್ಯೆ ತನಗಿಂತ ಕಿರಿಯ ಬೌಲರ್ ಗಳಿಗೆ ಟಿಪ್ಸ್ ಕೊಡುವುದು, ಕೋಚ್ ಅನಿಲ್ ಕುಂಬ್ಳೆಯೊಂದಿಗೆ ನೆಟ್ಸ್ ನಲ್ಲಿ ಚರ್ಚೆ ನಡೆಸುವುದು ಮಿಶ್ರಾಗೆ ಖುಷಿಯ ವಿಚಾರವಂತೆ.

“ಯುವ ಬೌಲರ್ ಗಳು ನನ್ನ ಬಳಿ ಬಂದು ಟಿಪ್ಸ್ ಕೇಳುವಾಗ ಅವರಿಗೆ ಹೇಳಿಕೊಡಲು ಖುಷಿಯಾಗುತ್ತದೆ. ನಾನು ಯಾರ ಮೇಲೂ ಒತ್ತಡ ಹೇರಲು ಬಯಸುವುದಿಲ್ಲ. ಆದರೆ ಪಂದ್ಯದ ನಡುವೆ ನನಗೆ ಏನಾದರೂ ಹೇಳಬೇಕೆಂದು ತೋಚಿದರೆ ನಿಸ್ಸಂಕೋಚವಾಗಿ ಹೇಳುತ್ತೇನೆ” ಎಂದು ಮಿಶ್ರಾ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ